fbpx
ಸಮಾಚಾರ

ರಶ್ಮಿಕಾ ಅಭಿನಯದ ಡಿಯರ್ ಕಾಮ್ರೇಡ್ ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗುತ್ತಾ?

ಕನ್ನಡ ಮೂಲದ ನಟಿ, ಟಾಲಿವುಡ್ ಸ್ಟಾರ್ ನಟಿಯಾಗಿ ಬೆಳೆದಿರುವ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತಮಿಳು ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿ ಕನ್ನಡ ಸಿನಿಮಾಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಶ್ಮಿಕಾ ಅವರು ತಮಿಳು ಸಂದರ್ಶನದಲ್ಲಿ “ನನಗೆ ಕನ್ನಡ ಸರಿಯಾಗಿ ಬರಲ್ಲ. ಅಲ್ಲದೇ ಕನ್ನಡ ಮಾತಾಡೋದು ತುಂಬಾನೇ ಕಷ್ಟ” ಎಂದು ತಮಿಳಿನಲ್ಲಿಯೇ ಹೇಳಿಕೆ ನೀಡಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.

ರಶ್ಮಿಕಾ ಮಂದಣ್ಣ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಒಕ್ಕೂಟದ ಸದಸ್ಯರು ಸೋಮವಾರ ಬೆಳಗ್ಗೆ ವಾಣಿಜ್ಯ ಮಂಡಳಿ ಮುಂಭಾಗ ಪ್ರತಿಭಟನೆ ನಡೆಸಿ, ರಶ್ಮಿಕಾ ಮಂದಣ್ಣ ನಟನೆಯ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆ ಆಗದಂತೆ ನಿಷೇಧ ಹೇರಬೇಕೆಂದು ಆಗ್ರಹಿಸಿದರು.

ಡಿಯರ್ ಕಾಮ್ರೇಡ್ ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗುತ್ತಾ?
ರಶ್ಮಿಕಾ ಮಂದಣ್ಣ ನಟನೆಯ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆ ಆಗದಂತೆ ನಿಷೇಧ ಹೇರಬೇಕೆಂದು ಆಗ್ರಹಿಸಿರುವುದರಿಂದ ರಶ್ಮಿಕಾ ಅಭಿನಯದ ಮುಂದಿನ ಚಿತ್ರ ‘ಡಿಯರ್ ಕಾಮ್ರೇಡ್ ಕರ್ನಾಟಕದಲ್ಲಿ ರಿಲೀಸ್ ಆಗುತ್ತೋ? ಇಲ್ಲವೋ? ಎಂಬ ಪ್ರಶ್ನೆ ಎದ್ದಿದೆ. ಚಿತ್ರ ಬಿಡುಗಡೆಯಾಗುತ್ತೋ ? ಇಲ್ಲವೋ? ಎಂಬುದಕ್ಕೆ ಕಾದುನೋಡಬೇಕಿದೆ.

ದೂರಿಗೆ ಪ್ರತಿಕ್ರಿಯಿಸಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ‘ರಶ್ಮಿಕಾ ಮಂದಣ್ಣ ಕನ್ನಡದ ವಿರುದ್ಧ ಮಾತನಾಡಿದ್ದಾರೆಂಬ ವಿಷಯ ನಮ್ಮ ಗಮನಕ್ಕೆ ಬಂದಿದೆ. ಅವರು ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ, ಯಾಕಾಗಿ ಮಾತನಾಡಿದ್ದಾರೆ ಎನ್ನುವ ವಿಚಾರವನ್ನು ನಾವು ಕೂಡ ಸಮಗ್ರವಾಗಿ ತಿಳಿದುಕೊಳ್ಳಬೇಕಿದೆ. ಅದೆಲ್ಲ ಮಾಹಿತಿ ಪಡೆದ ನಂತರ ನಮ್ಮ ಪರಿಮಿತಿಯೊಳಗೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆನ್ನುವುದನ್ನು ಆದಷ್ಟುಬೇಗ ನಿರ್ಧರಿಸಲಾಗುವುದು’ ಎಂದು ಹೇಳಿದ್ದಾರೆ.

‘ಕನ್ನಡದಿಂದಲೇ ನಟಿಯಾಗಿ ಬೆಳೆದ ರಶ್ಮಿಕಾ ಮಂದಣ್ಣ, ಪರಭಾಷೆಗಳಲ್ಲಿ ತಮಗೆ ಅವಕಾಶಗಳಿವೆ ಎನ್ನುವ ಕಾರಣಕ್ಕೆ ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ’ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top