fbpx
ಸಮಾಚಾರ

ವಿದಾಯದ ನಂತರ ಇಂದು ಮತ್ತೆ ಕಣಕ್ಕಿಳಿಯುತ್ತಿದ್ದಾರೆ ಯುವಿ : ಯುವರಾಜ್ ಸಿಂಗ್ vs ಕ್ರಿಸ್ ಗೇಲ್ ಹೋರಾಟಕ್ಕೆ ವೇದಿಕೆ ಸಜ್ಜು.

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಯುವರಾಜ್ ಸಿಂಗ್‌ ಅವರು ವಿದಾಯದ ನಂತ್ರ ದೇಶಿಯ ಟೂರ್ನಿಗಳಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಹೌದು, ಗ್ಲೋಬಲ್ ಕೆನಡಾ ಟಿ20 ಲೀಗ್ ಟೂರ್ನಿ ಇಂದಿನಿಂದ (ಜು.25) ಆರಂಭಗೊಳ್ಳುತ್ತಿದೆ. ಇದರಲ್ಲಿ ಯುವರಾಜ್ ಸಿಂಗ್ ಭಾಗವಹಿಸುತ್ತಿದ್ದಾರೆ.

ಟೂರ್ನಿಯ ಉದ್ಘಟಾನಾ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಮುಖಾಮುಖಿಯಾಗುತ್ತಿದೆ. ಈ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾತರಗೊಂಡಿದ್ದಾರೆ. ಯುವರಾಜ್ ಸಿಂಗ್ ತಂಡದಲ್ಲಿ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಡಿಗ ಬ್ರೆಂಡನ್ ಮೆಕ್ಕಲಂ, ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್, ನ್ಯೂಜಿಲೆಂಡ್ ತಂಡದ ಮಿಚೆಲ್ ಮೆಕ್ಲೆನಾಘನ್ ಸೇರಿದಂತೆ ಸ್ಟಾರ್ ಆಟಗಾರರಿದ್ದಾರೆ. ಇತ್ತ ಕ್ರಿಸ್ ಗೇಲ್ ತಂಡದಲ್ಲಿ ಪಾಕಿಸ್ತಾನದ ಶೋಯಿಬ್ ಮಲ್ಲಿಕ್, ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಸೇರಿದಂತೆ ಬಲಿಷ್ಠ ಆಟಗಾರರಿದ್ದಾರೆ.

ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು:
ಟೊರಂಟೊ ನ್ಯಾಷನಲ್ಸ್
ಮಾಂಟ್ರಿಯಲ್ ಟೈಗರ್ಸ್,
ಎಡ್ಮಂಟನ್ ರಾಯಲ್ಸ್,
ವ್ಯಾಂಕೋವರ್ ನೈಟ್ಸ್,
ವಿನ್ನಿಪೆಗ್ ಹಾಕ್ಸ್,
ಬ್ರಂಪ್ಟನ್ ವೋಲ್ವ್ಸ್.

ಎರಡನೇ ಆವೃತ್ತಿಯ ಕೆನೆಡಾ ಗ್ಲೋಬಲ್ ಟಿ20 ಟೂರ್ನಿಯು ಜುಲೈ 25ರಿಂದ (ಇಂದು) ಆರಂಭವಾಗಿ ಆಗಸ್ಟ್ 11ರ ವರೆಗೆ ಸಾಗಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top