fbpx
ಸಮಾಚಾರ

“ದುಡ್ಡು ನಮ್ದು, ಊರು ನಮ್ದು, ಬ್ಯಾಂಕ್ ನಮ್ದು ಆದರೆ ಆದ್ರೆ ಅಲ್ಲಿ ಕೆಲಸ ಮಾಡುವವನ ಭಾಷೆ ಮಾತ್ರ ಯಾವನದ್ದೋ” ಹಂಸಲೇಖ ಗರಂ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳಲ್ಲಿ (ಆರ್​ಆರ್​ಬಿ) ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ಮೂಲಕ ಅಧಿಕಾರಿಗಳ ನೇಮಕಾತಿ ವೇಳೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎಲ್ಲೆಡೆ ಜೋರಾಗಿದೆ. ಕರ್ನಾಟಕದ ಸಂಸದರೂ ಕೂಡ ಈ ಬಗ್ಗೆ ಸಂಸತ್ ನಲ್ಲಿ ಪ್ರಸ್ತಾಪಿಸಿದ್ದಾರೆ.. ಇದೀಗ ನಾದಬ್ರಹ್ಮ ಹಂಸಲೇಖ ಕೂಡ ಈ ಬಗ್ಗೆ ಗರಂ ಆಗಿದ್ದಾರೆ.

 

 

ಖಾಸಗಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ಹಂಸಲೇಖ “2014ಕ್ಕೂ ಮುಂಚೆ‌ ಕರ್ನಾಟಕದಲ್ಲಿ ಬಾಂಕ್ ಉದ್ಯೋಗ ಪಡೆಯಲು ಕನ್ನಡ ಕಡ್ಡಾಯವಾಗಿ ಕಲಿತಿರಬೇಕು ಎಂಬ ಕಾನೂನು ಇತ್ತು. ಆದರೆ ಈಗ ಈ ಕಾನೂನು ತೆಗೆದಿದ್ದಾರೆ. ಹಾಗಾಗಿ ನಮ್ಮ ಬ್ಯಾಂಕ್ ಗಳಲ್ಲಿ ಬೇರೆ ರಾಜ್ಯದ ಜನರೇ ಕೆಲಸಕ್ಕೆ ಸೇರುತ್ತಿದ್ದಾರೆ. ಮತ್ತೆ ಹಳೆ ಕಾನೂನನ್ನು ಜಾರಿಗೊಳಿಸಲು ನಾವೆಲ್ಲಾ ಹೋರಾಟ ಮಾಡಬೇಕು..

ದುಡ್ಡು ನಮ್ದು, ಊರು ನಮ್ದು, ಬ್ಯಾಂಕ್ ನಮ್ದು ಆದರೆ ಭಾಷೆ ಮಾತ್ರ ಯಾವನದ್ದೋ.. ನಮ್ಮ ಕಷ್ಟವನ್ನು ನಾವು ಹೇಗೆ ಅವನ ಬಳಿ ಹೇಳಿಕೊಳ್ಳಬೇಕು. ಅವನ ಭಾಷೆ ನಮಗೆ ಬರೋದಿಲ್ಲ. ನಮ್ಮ ಭಾಷೆ ಅವನಿಗೆ ಅರ್ಥವಾಗೋದಿಲ್ಲ.. ನಾವು ಗ್ರಾಹಕರು ಹೇಗೆ ನಮ್ಮ ಸಮಸ್ಯೆಯನ್ನು ಭಾಷೆ ಬಾರದ ಉದ್ಯೋಗಿಗಳ ಹೇಗೆ ಹೇಳಿಕೊಳ್ಳಬೇಕು?” ಎಂದು ಹಂಸಲೇಖ ಬೇಸರ ವ್ಯಕ್ತಪಡಿಸಿದ್ದಾರೆ..

ಹಾಗೆಯೆ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಕನ್ನಡದಲ್ಲಿಯೂ ಪ್ರಕಟಿಸಲು ಇತ್ತೀಚಿಗೆ ನಿರ್ಧರಿಸಿರುವುವುದನ್ನು ಹಂಸಲೇಖ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top