fbpx
ಸಮಾಚಾರ

ಬಾಲಿವುಡ್ ನ ‘ಮಿಷನ್ ಮಂಗಳ್’ ಚಿತ್ರದಲ್ಲಿ ಕನ್ನಡ ಮಾತನಾಡಿದ್ದಾರಂತೆ ಹಿರಿಯ ನಟ ದತ್ತಣ್ಣ.

ಅಪರೂಪದ ಕಲಾವಿದ ದತ್ತಣ್ಣ ಈಗ ಬಾಲಿವುಡ್‌ನ ಬಿಗ್‌ ಬಜೆಟ್‌ ಚಿತ್ರದ ಭಾಗವಾಗಿದ್ದಾರೆ. ಅಕ್ಷಯ್‌ ಕುಮಾರ್‌, ನಿತ್ಯಾ ಮೆನನ್‌, ವಿದ್ಯಾ ಬಾಲನ್‌, ಸೋನಾಕ್ಷಿ ಸಿನ್ಹಾ- ಹೀಗೆ ದೊಡ್ಡ ತಾರಾಗಣ ಹೊಂದಿರುವ ಮಿಷನ್‌ ಮಂಗಲ್‌ ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಆ ಚಿತ್ರದಲ್ಲಿ ದತ್ತಣ್ಣ ಅವರು ಇಸ್ರೋ ವಿಜ್ಞಾನಿ ಪಾತ್ರವನ್ನು ಮಾಡುತ್ತಿದ್ದಾರೆ.

 

 

ಸದ್ಯ ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಅದರಲ್ಲಿ ದತ್ತಣ್ಣ ಸಹ ಕಾಣಿಸಿಕೊಂಡಿರುವುದು ಸ್ಯಾಂಡಲ್‌ವುಡ್‌ ಸಿನಿಮಾ ಪ್ರೇಮಿಗಳಿಗೆ ಖುಷಿ ತಂದಿದೆ. ” ಕರ್ನಾಟಕವೇ ಈ ಚಿತ್ರದ ಪ್ರಮುಖ ಮಿಷನ್‌ ಸೆಂಟರ್‌ ಆಗಿರುವುದರಿಂದ ಈ ಚಿತ್ರದಲ್ಲಿ ಕೆಲವು ಸಲ ಕನ್ನಡ ಮಾತನಾಡಿದ್ದೇನೆ. ಸಿನಿಮಾದಲ್ಲಿ ಜೋರಾಗಿ ಮಳೆ ಬರುವ ಸನ್ನಿವೇಶದಲ್ಲಿ ‘ಓ ಸುಡುಗಾಡು ಎಲ್ಲಾ ಕೊಚ್ಚೆ ಇಲ್ಲಿ’ ಎಂಬಂತಹ ಡೈಲಾಗ್‌ಗಳನ್ನು ಹೊಡೆದಿದ್ದೇನೆ.

“ಈ ಸಿನಿಮಾಗಾಗಿ ಹಾಸನದಲ್ಲಿರುವ ಇಸ್ರೋ ಸೆಂಟರ್‌ನ್ನು ರೀ ಕ್ರಿಯೇಟ್‌ ಮಾಡಲಾಗಿತ್ತು. ಈ ಮೂಲಕ ಹಾಸನ ಬಾಲಿವುಡ್‌ ಸಿನಿಮಾದಲ್ಲಿ ರೀ ಕ್ರಿಯೇಟ್‌ ಆಗಿದೆ ಎನ್ನಬಹುದು’ ಎನ್ನುತ್ತಾರೆ ನಟ ದತ್ತಣ್ಣ.

ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ಒಂದು ದಿನ ಬೆಂಗಳೂರಿನ ಆನಂದರಾವ್‌ ಸರ್ಕಲ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದಕ್ಕಾಗಿ ಇಡೀ ಸಿನಿಮಾ ತಂಡವೇ ಬೆಂಗಳೂರಿನಲ್ಲಿತ್ತು’ ಎಂದು ಅವರು ಹೇಳಿದ್ದಾರೆ. ಇಸ್ರೋದ ಮಂಗಳಯಾನ ಪ್ರೊಜೆಕ್ಟ್ ಆಧರಿಸಿರುವ ಚಿತ್ರ ಇದು. ಈ ಚಿತ್ರ ಇದೇ ಆಗಸ್ಟ್ 15ರಂದು ತೆರೆಗೆ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top