fbpx
ಸಮಾಚಾರ

ಧೋನಿಯ ನಂ.7 ಜೆರ್ಸಿ ಯಾರಿಗೆ ಸಿಗಲಿದೆ ಗೊತ್ತಾ?

ಮುಂದಿನ ತಿಂಗಳ ಮೊದಲ ವಾರದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ನಡುವೆ ಆರಂಭವಾಗಲಿರುವ ಆ್ಯಷಸ್ ಸೀರಿಸ್‍ನಲ್ಲಿ ಕ್ರಿಕೆಟ್ ಆಟಗಾರರು ಮೊದಲ ಬಾರಿಗೆ ನಂಬರ್ ಹಾಗೂ ತಮ್ಮ ಹೆಸರು ಇರುವ ಬಿಳಿ ಜೆರ್ಸಿಗಳನ್ನು ಧರಿಸಿ ಕಣಕ್ಕೆ ಇಳಿಯಲಿದ್ದಾರೆ.  ಇದರೊಂದಿಗೆ ಭಾರತ ಹಾಗೂ ವೆಸ್ಟ್ ಇಂಡೀಸ್ ಟೂರ್ನಿಯಲ್ಲೂ ಇತ್ತಂಡಗಳು ಇದೇ ಮಾದರಿಯಲ್ಲಿ ಕಣಕ್ಕೆ ಇಳಿಯಲಿವೆ.

ಆಗಸ್ಟ್ 22 ರಿಂದ ಟೀಂ ಇಂಡಿಯಾ – ವೆಸ್ಟ್ ಇಂಡೀಸ್ ಟೆಸ್ಟ್ ಟೂರ್ನಿ ಆರಂಭವಾಗಲಿದ್ದು, ಏಕದಿನ ಮತ್ತು ಟಿ20 ಮಾದರಿಯಲ್ಲೇ ಆದೇ ನಂಬರ್ ನೊಂದಿಗೆ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ಏಕದಿನ ಹಾಗೂ ಟ್ವೆಂಟಿ-20 ಮಾದರಿಗಳಲ್ಲಿರುವುದಕ್ಕೆ ಸಮಾನವಾಗಿ ನಾಯಕ ವಿರಾಟ್ ಕೊಹ್ಲಿ 18 ಹಾಗೂ ರೋಹಿತ್ ಶರ್ಮಾ 45 ಜೆರ್ಸಿ ನಂಬರ್ ಬಳಕೆ ಮಾಡಲಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‍ಗೆ 2014 ರಲ್ಲಿ ಧೋನಿ ನಿವೃತ್ತಿ ಹೇಳಿರುವುದರಿಂದ ಅವರು ಧರಿಸುತ್ತಿದ್ದ ನಂ.7 ಜೆರ್ಸಿಯನ್ನು ಯಾರು ಪಡೆಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಹಿಂದೊಮ್ಮೆ ಸಚಿನ್ 10 ಅದೃಷ್ಟ ಸಂಖ್ಯೆಯನ್ನು ಶಾರ್ದೂಲ್ ಠಾಕೂರ್‌ಗೆ ನೀಡಿದಾಗ ವ್ಯಾಪಕ ಆಕ್ರೋಶ ಎದ್ದಿದ್ದವು. ಈ ಘಟನೆ ಬಳಿಕ ಸಚಿನ್ ಜೆರ್ಸಿ ನಂಬರನ್ನು ಇನ್ಯಾರಿಗೂ ಧರಿಸಲು ಬಿಸಿಸಿಐ ಅವಕಾಶ ನೀಡಿಲ್ಲ. ಧೋನಿ ವಿಷಯದಲ್ಲೂ ಇದು ಮರುಕಳಿಸುವ ಸಾಧ್ಯತೆಯಿದೆ. ಹಾಗಾಗಿ ವಿಶ್ವಕಪ್ ವಿಜೇತ ನಾಯಕನ 7 ಅಂಕಿ ಜೆರ್ಸಿಯನ್ನು ಇತರೆ ಆಟಗಾರರಿಗೆ ನೀಡುವ ಸಾಧ್ಯತೆ ಕ್ಷೀಣಿಸಿದೆ.

ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್ ಇನ್ನು ಆಡುತ್ತಿಲ್ಲ, ಅವರ ಜೆರ್ಸಿ ನಂ.7 ಲಭ್ಯವಿದೆ. ಆದರೆ ಈ ಜೆರ್ಸಿ ಸಂಖ್ಯೆ ಯಾರೂ ಧರಿಸುವ ಸಾಧ್ಯತೆ ಕಡಿಮೆಯಿದೆ,’ ಎಂದು ಬಿಸಿಸಿಐಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂದಹಾಗೆ ಸಚಿನ್ ತೆಂಡೂಲ್ಕರ್ ಅವರ ಫೇಮಸ್ ಜೆರ್ಸಿ ನಂ.10, ಬಿಸಿಸಿಐನಿಂದ ‘ಅನಧಿಕೃತವಾಗಿ ನಿವೃತ್ತಿಯಾಗಿದೆ’ ಎಂದು ಪರಿಗಣಿಸಲ್ಪಟ್ಟಿದೆ. ಅಂದರೆ ನಂ.10 ಜೆರ್ಸಿ ಭವಿಷ್ಯದಲ್ಲೂ ಯಾವುದೇ ಭಾರತೀಯ ಆಟಗಾರ ಧರಿಸಲು ಅವಕಾಶವಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top