fbpx
ಸಮಾಚಾರ

ಸಿಎಂ ಆಗುವ ಉತ್ಸಾಹದ ಬೆನ್ನಲ್ಲೇ ಮತ್ತೆ ಹೆಸರು ಬದಲಿಸಿಕೊಂಡ ಯಡಿಯೂರಪ್ಪ?

ರಾಜಕಾರಣದಲ್ಲಿ ಜನರ ಬೆಂಬಲದ ಜೊತೆಗೆ ಅದೃಷ್ಟವೂ ಕೈಗೂಡಬೇಕಾಗುತ್ತದೆ. ಅದು ಕರ್ನಾಟಕ ರಾಜ್ಯ ರಾಜಕಾರಣದ ಮಟ್ಟಿಗಂತೂ ಸತ್ಯವೆಂದೇ ಹೇಳಬಹುದು. ಇದೀಗ 14 ತಿಂಗಳ ಅಧಿಕಾರದಿಂದ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಕೆಳಗಿಳಿದಿದೆ. ಬಿಜೆಪಿಯ ಮುಖ್ಯಮಂತ್ರಿಯಾಗಿ ಬಿ.ಎಸ್​. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದೆಲ್ಲದರ ನಡುವೆಯೇ ಇದ್ದಕ್ಕಿದ್ದಂತೆ ಯಡಿಯೂರಪ್ಪ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ.

 


 

ಯಡಿಯೂರಪ್ಪ ಅವರು ಇಂಗ್ಲಿಷ್​ನಲ್ಲಿ ತಮ್ಮ ಹೆಸರಿನ ಸ್ಪೆಲ್ಲಿಂಗ್​ ಬದಲಿಸಿಕೊಂಡಿದ್ದಾರೆ. ಅವರು ಈ ಮೊದಲು ಸಂಖ್ಯಾಶಾಸ್ತ್ರಜ್ಞರೊಬ್ಬರ ಸಲಹೆ ಮೇರೆಗೆ ತಮ್ಮ ಹೆಸರಿನಲ್ಲಿ ಸ್ಪೆಲ್ಲಿಂಗ್​ ಬದಲಿಸಿಕೊಂಡು Yediyurappa ಎಂಬುದನ್ನು Yeddyurappa ಎಂದು ಬದಲಿಸಿಕೊಂಡಿದ್ದರು. ಈಗ ಮತ್ತೆ ಅವರು ತಮ್ಮ ಹೆಸರನ್ನು ಹಿಂದಿನಂತೆಯೇ ಬದಲಿಸಿಕೊಂಡಿದ್ದಾರೆ.

ಯಡಿಯೂರಪ್ಪ ಅವರು 1975 ರಲ್ಲಿ ಮೊದಲ ಬಾರಿಗೆ ಪಾಲಿಕೆ ಚುನಾವಣೆ ಗೆದ್ದ ಬಳಿಕ ಮೊದಲ ಬಾರಿಗೆ 2007 ರಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ Yediyurappa ಎಂದು ತಮ್ಮ ಹೆಸರನ್ನು ನಮೂದಿಸುತ್ತಿದ್ದರು. ಆ ನಂತರ ಸಂಖ್ಯಾಶಾಸ್ತ್ರಜ್ಞರೊಬ್ಬರ ಸಲಹೆಯಂತೆ ತಮ್ಮ ಹೆಸರಿನ ಸ್ಪೆಲ್ಲಿಂಗ್​ ಅನ್ನು Yeddyurappa ಎಂದು ಬದಲಿಸಿಕೊಂಡಿದ್ದರು.

2018ರಲ್ಲಿ ಶಿಕಾರಿಪುರ ಶಾಸಕರಾಗಿ ಆಯ್ಕೆಯಾಗುವ ಮುನ್ನ ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಅಫಿದವಿತ್‌ನಲ್ಲಿ BS Yeddyurappa ಎಂದು ಘೋಷಿಸಿಕೊಂಡಿದ್ದರು. ಆದರೆ ಈಗ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಸರಕಾರ ರಚನೆ ಹಕ್ಕು ಮಂಡಿಸುವ ವೇಳೆ ಸಲ್ಲಿಸಿದ ಅಫಿದವಿತ್‌ನಲ್ಲಿ ಮತ್ತೆ BS Yediyurappa ಎಂದೇ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top