fbpx
ಸಮಾಚಾರ

ಕುಮಾರಣ್ಣನ ಊರಿನಲ್ಲಿ ‘ದರ್ಶನ್ ಹಾಡು’ ಬ್ಯಾನ್- ಡಿ ಬಾಸ್ ಭಕ್ತರ ಆಕ್ರೋಶ..

ಮಂಡ್ಯದಲ್ಲಿ ನಿಖಿಲ್ ಸೋಲಿಗೆ ರಾಮನಗರದಲ್ಲಿ ಸೇಡು ತೀರಿಸಿಕೊಂಡ್ರಾ ಎಂಬ ಅನುಮಾನವೊಂದು ಇದೀಗ ಕಾಡುತ್ತಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಡ್ಡಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಾಡುಗಳನ್ನು ಬ್ಯಾನ್ ಮಾಡಲಾಗಿದೆ.

ಹೌದು, ರಾಮನಗರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ದರ್ಶನ್ ಸಿನಿಮಾದ ಹಾಡು ಹಾಡೋಕೆ ಮುಂದಾದರೂ ಆಯೋಜಕರು ಬಿಟ್ಟಿಲ್ಲ. ಯಾವುದೇ ಕಾರಣಕ್ಕೂ ದರ್ಶನ್ ಸಿನಿಮಾದ ಹಾಡನ್ನು ಹಾಡಲೇಬಾರದು ಎಂದು ಕಾರ್ಯಕ್ರಮದ ಆಯೋಜಕರು ಫರ್ಮಾನು ಹೊರಡಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದರ್ಶನ್ ಸಿನಿಮಾದ ಹಾಡುಗಳು ಯಾಕೆ ಬೇಡವೆಂದು ಹೇಳಿರುವುದರ ಬಗ್ಗೆ ಆಯೋಜಕರು ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಮಂಡ್ಯ ಚುನಾವಣೆಯ ಎಫೆಕ್ಟ್ ನಿಂದಾಗಿಯೇ ರಾಮನಗರದಲ್ಲಿ ದರ್ಶನ್ ಸಿನಿಮಾದ ಹಾಡುಗಳನ್ನು ಬ್ಯಾನ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಈ ಸಮಾರಂಭದಲ್ಲಿ ದರ್ಶನ್ ಹಾಡು ಹಾಡುವಂತೆ ಅಭಿಮಾನಿಗಳು ವಿಜಯ್ ಪ್ರಕಾಶ್ ಗೆ ಒತ್ತಾಯಿಸಿದರು. ಆದರೆ ಅವರು ಹಾಡಲಿಲ್ಲ. ಇದಕ್ಕೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top