fbpx
ಸಮಾಚಾರ

ಕೊಹ್ಲಿ ಮತ್ತು ರೋಹಿತ್ ನಡುವೆ ಹೊತ್ತಿಕೊಂಡ ‘ಅನ್ ಫಾಲೋ’ ವಿವಾದ- ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿದ್ದೇಕೆ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತು ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಗೆ ಕೊಹ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ್ದರು ಕೂಡ ತಮ್ಮ ಅನುಪಸ್ಥಿತಿಯಲ್ಲಿ ರೋಹಿತ್‍ಗೆ ನಾಯಕತ್ವದ ನೀಡುವುದರಿಂದ ಕೊಹ್ಲಿ ಟೂರ್ನಿಗೆ ಬಂದಿದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಆದರೆ ಈ ವರದಿಯನ್ನು ಬಿಸಿಸಿಐ ಅಲ್ಲಗೆಳೆದಿದ್ದರೂ ಕೂಡ ಕೊಹ್ಲಿ, ರೋಹಿತ್ ನಡುವಿನ ಮನಸ್ತಾಪಕ್ಕೆ ಪುಷ್ಟಿ ನೀಡುವಂತ ಪ್ರಸಂಗವೊಂದು ನಡೆದಿದೆ.

 

 

ದಿಗ್ಗಜ ಬ್ಯಾಟ್ಸ್ ಮನ್ ಗಳ ಪರಸ್ಪರ ಮನಸ್ತಾಪಗೊಂಡಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಖ್ಯಾತ ಸಾಮಾಜಿಕ ಜಾಲತಾಣಗಳಾದ ಇನ್ ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಖಾತೆಗಳನ್ನು ಅನ್ ಫಾಲೋ ಮಾಡಿದ್ದಾರೆ. ಆ ಮೂಲಕ ಊಹಾಪೋಹಗಳಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

ಅಚ್ಚರಿ ಎಂದರೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೆ ಅವರೂ ಕೂಡ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾರನ್ನು ಫಾಲೋ ಮಾಡುತ್ತಿಲ್ಲ. ಆದರೆ ಅನುಷ್ಕಾ ಶರ್ಮಾ ಕೂಡ ರೋಹಿತ್ ಮತ್ತು ಅವರ ಪತ್ನಿ ಇಬ್ಬರನ್ನೂ ಫಾಲೋ ಮಾಡುತ್ತಿಲ್ಲ. ಆದರೆ ವಿರಾಟ್ ಕೊಹ್ಲಿ ಮಾತ್ರ ರೋಹಿತ್ ಶರ್ಮಾ ಅವರ ಖಾತೆಯನ್ನು ಫಾಲೋ ಮಾಡುತ್ತಿದ್ದು, ಅವರ ಪತ್ನಿ ರಿತಿಕಾ ಅವರ ಖಾತೆಯನ್ನು ಫಾಲೋ ಮಾಡುತ್ತಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top