fbpx
ಸಮಾಚಾರ

ಕೆಜಿಎಫ್ ಚಾಪ್ಟರ್ 2 ‘ಅಧೀರ’ ಪೋಸ್ಟರ್ ಬಿಡುಗಡೆ- ಹೆಚ್ಚಿದ ಕುತೂಹಲ

2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಮಾಡಿತ್ತು. ಕೆಜಿಎಫ್-2 ಚಿತ್ರತಂಡ ಸರಳವಾಗಿ ಮುಹೂರ್ತ ಮಾಡಿಕೊಂಡು ಚಿತ್ರೀಕರಣವನ್ನು ಆರಂಭಿಸಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಚಿತ್ರದ ಶೂಟಿಂಗ್ ಸೆಟ್ ಫೋಟೋಗಳು ಸದ್ದು ಮಾಡಿದ್ದವು. ಕೆಜಿಎಫ್ ನಿರೀಕ್ಷೆಗಳ ಪರ್ವತವನ್ನೇ ಹುಟ್ಟಿಸಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಕೆಜಿಎಫ್ 2ಗಾಗಿ ದೇಶವೇ ಎದುರು ನೋಡುತ್ತಿದೆ. ಈ ಚಿತ್ರದಲ್ಲಿ ತೀವ್ರ ಕುತೂಹಲ ಕೆರಳಿದ್ದ ಅಧೀರ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

 

 

‘ಕೆಜಿಎಫ್ ಚಾಪ್ಟರ್-2’ ಚಿತ್ರತಂಡ ಇಂದು ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅಧೀರ ಯಾರಾಗಿರುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಅಧಿಕೃತವಾಗಿ ಸಿನಿಮಾ ಖಳನಾಯಕ ಅಧೀರನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ಹೊಂಬಾಳೆ ಫಿಲ್ಮ್ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ರಿಲೀಸ್ ಆಗಿದ್ದು, ಅಧೀರ ಯಾರಾಗುತ್ತಾರೆ ಎಂದು ಮೊದಲೇ ಊಹಿಸಿದ ರೀತಿಯಲ್ಲಿಯೇ ಬಾಲಿವುಡ್ ನಟ ಸಂಜಯ್ ದತ್ ಅವರೇ ಅಧೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರೀಕ್ಷೆ ಮಾಡಿರುವಂತೆ ಬಾಲಿವುಡ್ ನಟ ಸಂಜಯ್ ದತ್ ಪೋಸ್ಟರ್. ಇಂದು (ಜುಲೈ 29) ನಟ ಸಂಜಯ್ ದತ್ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ಚಿತ್ತತಂಡವು ಅವರ ಪೋಸ್ಟರ್‌ಅನ್ನು ರಿಲೀಸ್ ಮಾಡುವ ಮೂಲಕ ಅವರಿಗೆ ವಿಭಿನ್ನ ಹಾಗೂ ವಿಶೇ‍ಷವಾಗಿ ‘ಬರ್ತ್ ಡೇ ವಿಶ್’ ಮಾಡಿದೆ. ಜತೆಗೆ, ಕೆಜೆಎಫ್ ಚಿತ್ರದಲ್ಲಿ ಅಸ್ಪಷ್ಟವಾಗಿ ಬಂದಿದ್ದ ‘ಅಧಿರ’ ಪಾತ್ರವು ಸಂಜಯ್ ದತ್ ಮೂಲಕ ಕಮಾಲ್ ಮಾಡಲಿದೆ ಎಂಬ ಸಂಗತಿ ಬಹಿರಂಗವಾದಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top