fbpx
ಸಮಾಚಾರ

ವಿಶ್ವ ಹುಲಿ ದಿನದಂದು ಹುಲಿ ದತ್ತು ಪಡೆದುಕೊಂಡ ಚಾಲೆಂಜಿಂಗ್ ಸ್ಟಾರ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿಯ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ಅವರ ಫಾರ್ಮ್ ಹೌಸ್, ಅಲ್ಲಿರೋ ಹಸು, ಕುದುರೆಗಳ ಕಥೆಯೆಲ್ಲ ಅಭಿಮಾನಿಗಳ ಪಾಲಿಗೆ ಹೊಸತೇನಲ್ಲ. ದರ್ಶನ್ ಮೈಸೂರು ಮೃಗಾಲಯದಲ್ಲಿನ ಕೆಲ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಲಹುತ್ತಿರೋದೂ ಕೂಡಾ ತಿಳಿದದ್ದೇ. ಇನ್ನು ಬೆಂಗಳೂರಿನ ದರ್ಶನ್ ಅವರ ಮನೆ ಮುಂದೆ ತರಹೇವಾರಿ ಪ್ರಬೇಧದ ನಾಯಿಗಳು ಕಾವಲಿಗಿರುತ್ತವೆ.

ಇದೀಗ ಮತ್ತೆ ನಟ ದರ್ಶನ್ ತಮ್ಮ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುವುದನ್ನು ಮುಂದುವರಿಸಿದ್ದಾರೆ. ನಟ ದರ್ಶನ್ ಅವರು ಈಗಾಗಲೇ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ನೆನ್ನೆ ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು 2.95 ಲಕ್ಷ ರೂ. ಚೆಕ್ ನೀಡಿ 4 ಪ್ರಾಣಿಗಳ ದತ್ತು ನವೀಕರಣ ಮಾಡಿಕೊಂಡಿದ್ದಾರೆ.

ಒಂದು ಗಂಡು ಹುಲಿ, ಎರಡು ಅನಾಕೊಂಡ ಹಾಗೂ ಆನೆಯನ್ನ ದರ್ಶನ್ ಮತ್ತೆ ದತ್ತು ಪಡೆದಿದ್ದಾರೆ. ಈ ಮೂಲಕ ದರ್ಶನ್ ತಮ್ಮ ಪ್ರಾಣಿಗಳ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ತೋರಿಸಿದ್ದಾರೆ.

ಅಂದಹಾಗೆ ದರ್ಶನ್​​​​​​​​ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಇದಕ್ಕೂ ಮೊದಲು ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಅವರು ಮೈಸೂರಿನ ತಮ್ಮ ಫಾರ್ಮ್​ ಹೌಸ್​ನಲ್ಲಿ ಚಿಕ್ಕದೊಂದು ಜೂ ಮಾಡಿದ್ದು, ಅಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನು ಪೋಷಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top