fbpx
ಸಮಾಚಾರ

‘ಮುನಿರತ್ನ ಕುರುಕ್ಷೇತ್ರ’ ಹಿಂದಿ ಅವತರಣಿಕೆ ಬಿಡುಗಡೆ ದಿನಾಂಕ ಮುಂದಕ್ಕೆ?

ಆಗಸ್ಟ್ 9ರಂದು ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆಯಾಗುತ್ತಿದೆ. ದಕ್ಷಿಣ ಭಾರತದ ಎಲ್ಲಾ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಸಿಕ್ಕಿದೆ. ಆದರೆ ಹಿಂದಿ ಭಾಷೆಯಲ್ಲಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗಬೇಕಿರುವುದರಿಂದ ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆ ಕೆಲ ದಿನಗಳ ಮಟ್ಟಿಗೆ ಮುಂದೆ ಹೋಗಬಹುದು.

ಕುರುಕ್ಷೇತ್ರ ಹಿಂದಿಯಲ್ಲಿ 1,300 ರಿಂದ 1,500 ಚಿತ್ರಮಂದಿರಗಳಲ್ಲಿ ತೆರೆಗೆ ತರುವ ಪ್ಲಾನ್ ಮಾಡಿದೆ ಚಿತ್ರತಂಡ. ಆದ್ರೀಗ ಒಂದು ವಾರಗಳ ಕಾಲತಡಾಗುವ ಸಾಧ್ಯತೆ ಇದ್ದು ಆಗಸ್ಟ್ 15ಕ್ಕೆ ಹಿಂದಿ ಕುರುಕ್ಷೇತ್ರ ರಿಲೀಸ್ ಆಲಿದೆ. ವಿಶೇಷ ಅನಾದರೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಮಿಷನ್ ಮಂಗಲ್ ಚಿತ್ರ ಕೂಡ ಅಂದೇ ತೆರೆಗೆ ಬರುತ್ತಿದೆ.

ಕುರುಕ್ಷೇತ್ರ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಡಿ ಮುನಿರತ್ನ ನಿರ್ಮಿಸಿದ್ದಾರೆ. ತಮಿಳು ಭಾಷೆಯಲ್ಲಿ ಕಾಲ ಚಿತ್ರದ ನಿರ್ಮಾಪಕ ಕಲೈಪುಳ್ಳಿ ಎಸ್ ತಾನು, ತೆಲುಗಿನಲ್ಲಿ ಗೀತಾ ಆಟ್ಸ್ಸ್ ಅಂಡ್ ಏಷಿಯನ್ ಸಿನೆಮಾಸ್ ವಿತರಣೆ ಮಾಡುತ್ತಿದೆ. ಮಲಯಾಳಂ ಭಾಷೆಯಲ್ಲಿ ವಿತರಕರು ಯಾರೆಂದು ಇನ್ನೆರಡು ದಿನಗಳಲ್ಲಿ ತೀರ್ಮಾನವಾಗಲಿದೆ.

ಭಾರೀ ಬಜೆಟ್‌ನ ಕುರುಕ್ಷೇತ್ರದ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕರ್ನಾಟಕ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಕನ್ನಡದ ಕುರುಕ್ಷೇತ್ರ ಸದ್ದು ಮಾಡುತ್ತಿದೆ. ಕುರುಕ್ಕ್ಷೇತ್ರ ಚಿತ್ರಕ್ಕೆ ಭಾರತೀಯ ಮಹಾಕಾವ್ಯ ಮಹಾಭಾರತವನ್ನು ಆಧರಿಸಿ ಜೆ.ಕೆ. ಭಾರವಿಯವರು ಬರೆದಿದ್ದಾರೆ..ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top