fbpx
ಸಮಾಚಾರ

#ElevateMosa ಅಭಿಯಾನಕ್ಕೆ ಬೆಂಬಲ ನೀಡಿದ ಐಎಎಸ್ ಅಧಿಕಾರಿ ಮಣಿವಣ್ಣನ್- ಕನ್ನಡಿಗರಿಗಾಗುತ್ತಿರುವ ಅನ್ಯಾಯದ ಬಗ್ಗೆ ಹೇಳಿದ್ದೇನು ಗೊತ್ತಾ?

ರಾಜ್ಯದ ಐಟಿ ಕ್ಷೇತ್ರದಲ್ಲಿ ಯುವ ಉದ್ಯೋಗಿಗಳಿಗೆ ಉತ್ತೇಜನ ನೀಡಲು ರೂಪಿಸಿರುವ ಎಲಿವೇಟ್‌-100 ಯೋಜನೆಯಲ್ಲಿ ಕರ್ನಾಟಕದ ಯುವ ಉದ್ಯಮಿಗಳಿಗೆ ಅರ್ಹತೆ ಇದ್ದರೂ ಅನರ್ಹಗೊಳಿಸಿ ಎಸಗಲಾಗುತ್ತಿರುವ ಘೋರ ಅನ್ಯಾಯದ ವಿರುದ್ಧ ಟ್ವಿಟ್ಟರ್ ನಲ್ಲಿ ಕನ್ನಡಿಗರು ಹ್ಯಾಶ್ ಟ್ಯಾಗ್ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ಅಭಿಯಾನಕ್ಕೆ ಕನ್ನಡದ ಖಡಕ್ ಐಎಎಸ್ ಆಫೀಸರ್ ಕ್ಯಾಪ್ಟನ್ ಮಣಿವಣ್ಣನ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

 

 

ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಮಣಿವಣ್ಣನ್ ” ಈ ಅಭಿಯಾನಕ್ಕೆ ನನ್ನ ಬೆಂಬಲವಿದೆ.. ಈ ವಿಷಯ ನನಗೆ ಅರ್ಥವಾಗುತ್ತದೆ. ಕರ್ನಾಟಕ ಸರ್ಕಾರದ ಬಹುಮಾನ ಅಥವಾ ನಿಧಿಯನ್ನು ಕನ್ನಡಿಗರಲ್ಲದವರಿಗೆ ಏಕೆ ನೀಡಬೇಕು? ಈ ವಿಚಾರದಲ್ಲಿ ಸ್ಥಳೀಯರನ್ನು ಉತ್ತೇಜಿಸಲು ಕನಿಷ್ಠ 75% ಅನ್ನು ಕರ್ನಾಟಕ ಸರ್ಕಾರ ಮೀಸಲಿಡಬೇಕು. ಐಟಿಬಿಟಿ ಇಲಾಖೆಯು ಇದನ್ನು ಸಕಾರಾತ್ಮಕವಾಗಿ ನೋಡುತ್ತದೆ ಎಂದು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಏನಿದು ವಿವಾದ:
ರಾಜ್ಯದ ಎಲ್ಲೆಡೆ ಇರುವ ನವೋದ್ಯಮಗಳಿಗೆ ಸಮಗ್ರ ಉದ್ಯಮಶೀಲತೆಯ ವೇದಿಕೆ ಒದಗಿಸುವುದು ಜೈವಿಕ ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನ ಇಲಾಖೆಯ ‘ಎಲಿವೇಟ್‌’ ಕಾರ್ಯಕ್ರಮದ ಮೂಲ ಉದ್ದೇಶ. ಹೀಗಿದ್ದರೂ ಇದು ಕರ್ನಾಟಕದ ಉದ್ಯೋಗಿಗಳಿಗೆ ಈ ಅವಕಾಶವನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ‘ಎಲಿವೇಟ್‌’ ಕಾರ್ಯಕ್ರಮದ ಮೂಲಕ ₹62 ಕೋಟಿ ನಿಧಿ ನೆರವನ್ನು 264 ನವೋದ್ಯಮಗಳು ಪಡೆದಿವೆ ಅವುಗಳಲ್ಲಿ ಬಹುತೇಕವು ಹೊರರಾಜ್ಯದ ಕಂಪನಿಗಳೇ ಆಗಿವೆ.

ಕರ್ನಾಟಕದ ದುಡ್ಡು ಹೊರರಾಜ್ಯಗಳ ಜಾತ್ರೆ ಎನ್ನುವ ಹಾಗೆ ಎಲಿವೇಟ್ ಕಾರ್ಯಕ್ರಮ ರೂಪುಗೊಂಡಿದೆ , ದೇಶದ ಯಾವುದೇ ರಾಜ್ಯದಲ್ಲಿ ನವೋದ್ಯಮಗಳಿಗೆ ಫಂಡಿಂಗ್ ನೀಡುವ ಪ್ರಕ್ರಿಯೆ ಜಾರಿಯಿಲ್ಲ ಆದ್ರೆ ಹೊರರಾಜ್ಯದ ಯಾವುದೇ ಕಂಪನಿಗಳು ಬಂದು ಇಲ್ಲಿ ನೊಂದಣಿ ಮಾಡಿಸಿ ‘ಎಲಿವೇಟ್‌’ ಕಾರ್ಯಕ್ರಮದ ಮೂಲಕ ತಮ್ಮ ಕಂಪನಿಗಳಿಗೆ ಹಣ ಪಡೆಯಬಹುದಾಗಿದೆ. ಈ ಅನ್ಯಾಯ ತಕ್ಷಣ ಸರಿಪಡಿಸಬೇಕೆಂದು ‘ಸಾಮಾನ್ಯ ಕನ್ನಡಿಗ’ ತಂಡದ ನೇತೃತ್ವದಲ್ಲಿ ಟ್ವಿಟ್ಟರ್ ಅಭಿಯಾನ ಆರಂಭವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top