fbpx
ಸಮಾಚಾರ

ಉದಯೋನ್ಮುಖ ಕನ್ನಡಿಗ ಕಂಪನಿಗಳಿಗೆ ಆಗುತ್ತಿರುವ ಮೋಸದ ಬಗ್ಗೆ ಸಂಸದ ಜಿಸಿ ಚಂದ್ರಶೇಖರ್ ಕಿಡಿ.

ರಾಜ್ಯದ ಐಟಿ ಕ್ಷೇತ್ರದಲ್ಲಿ ಯುವ ಉದ್ಯೋಗಿಗಳಿಗೆ ಉತ್ತೇಜನ ನೀಡಲು ರೂಪಿಸಿರುವ ಎಲಿವೇಟ್‌-100 ಯೋಜನೆಯಲ್ಲಿ ಹೈದರಾಬಾದ್‌-ಕರ್ನಾಟಕದ ಯುವ ಉದ್ಯಮಿಗಳಿಗೆ ಅರ್ಹತೆ ಇದ್ದರೂ ಅನರ್ಹಗೊಳಿಸಿ ಎಸಗಲಾಗುತ್ತಿರುವ ಅನ್ಯಾಯದ ವಿರುದ್ಧ ಸಂಸದ ಜಿಸಿ ಚಂದ್ರಶೇಖರ್ ಕಿಡಿಕಾರಿದ್ದಾರೆ.

 

 

ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿರುವ ಜಿಸಿ ಚಂದ್ರಶೇಖರ್ ಐಟಿ-ಬಿಟಿ ಇಲಾಖೆಯ ‘ಎಲಿವೇಟ್‌’ ಕಾರ್ಯಕ್ರಮದಲ್ಲಿ ಕನ್ನಡಿಗರನ್ನು ಕಡೆಗಣಿಸಿರುವ ಬಗ್ಗೆ ಕಿಡಿಕಾರಿದ್ದು ಈ ರೀತಿ ಕನ್ನಡಿಗರಿಗೆ ಮುಂದೆ ಮೋಸವಾಗದಂತೆ ನೋಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

“ಕರ್ನಾಟಕದಲ್ಲಿ ನವೋದ್ಯಮಗಳು ಸೃಷ್ಟಿಯಾಗಲು ಕರ್ನಾಟಕ ಸರ್ಕಾರದ ಅಡಿಯಲ್ಲಿ ಸ್ಥಾಪಿತವಾಗಿರುವ ಸಂಸ್ಥೆ ಕೆಬಿಟ್ಸ್ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಪತ್ರಿಕೆಗಳಿಂದ ನಮಗೆ ತಿಳಿದುಬಂದ ವಿಷಯವೇನೆಂದರೆ ನೀವು ನವಉದ್ಯಮಿಗಳನ್ನು ಪೋಷಿಸಲು ಶುರುಮಾಡಿರುವ ‘ಎಲಿವೇಟ್‌’ ಕಾರ್ಯಕ್ರಮದಲ್ಲಿ ಅತಿಯಾಗಿ ಹೊರರಾಜ್ಯದವರನ್ನು ಪೋಷಿಸುತ್ತಿದ್ದೀರಿ ಎಂದು ಆರೋಪಿಸಲಾಗಿದೆ, ನಮ್ಮ ರಾಜ್ಯದಿಂದ ಸ್ಥಾಪನೆಯಾದ ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ ಈ ರೀತಿ ಕನ್ನಡಿಗರಿಗೆ ಅದರಲ್ಲೂ ನವೋದ್ಯಮಿಗಳನ್ನು ನಿರ್ಲಕ್ಷಿಸುತ್ತಿರುವುದು ಕನ್ನಡಿಗರಿಗೆ ಮಾಡಿದ ಮೋಸವಲ್ಲದೆ ಮತ್ತಿನ್ನೇನು ಆದ್ದರಿಂದ ಈ ಕೂಡಲೇ ತಾವು ಘೋಷಿರುವ ‘ಎಲಿವೇಟ್‌’ ವಿಜೇತರ ಪಟ್ಟಿಯನ್ನು ತಡೆಹಿಡಿಯಬೇಕು.”

“ಕೂಡಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕರ್ನಾಟಕದ ಕನ್ನಡಿಗರು ಕಟ್ಟಿದ ಸಂಸ್ಥೆಗಳಿಗೆ ಆದ್ಯತೆ ನೀಡಿ ಉತ್ತೇಜಿಸಬೇಕು, ಈ ಕೂಡಲೇ ಅಭ್ಯರ್ಥಿಗಳ ಪಟ್ಟಿಯನ್ನು ಪುನಃ ಪರಿಶೀಲಿಸಿ ಹೊಸ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿ, ಈ ಕಾರ್ಯಕ್ರಮ ಮೂಲ ಉದ್ದೇಶಗಳಿಂದ ವಿಷಯಾಂತರವಾಗಿದ್ದು ಯಾಕೆ ಎಂಬುದರ ತನಿಖೆಯಾಗಬೇಕು ಹಾಗೆಯೇ ಇಲ್ಲಿಯವರೆಗೂ ನಡೆಸಿಕೊಂಡು ಬಂದ ಪ್ರಕ್ರಿಯೆ ಹಾಗು ವಿಜೇತರ ಪಟ್ಟಿಗಳಿಗೆ ಅನುಸರಿಸಿದ ಮಾನದಂಡಗಳು ಮುಂತಾದ ದಾಖಲಾತಿಗಳನ್ನು ನಮ್ಮ ಕಚೇರಿಗೂ ಕಳುಹಿಸಿಕೊಡಬೇಕಾಗಿ ವಿನಂತಿ.” ಎಂದು ಸಂಸದರು ತಮ್ಮ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ..

ಈ ವಿಚಾರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೂಡ ಹಂಚಿಕೊಂಡಿರುವ ಜಿಸಿ ಚಂದ್ರಶೇಖರ್ “#Elevate2019 ರಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದ್ದು ಮೇಲ್ನೋಟಕ್ಕೆ ತಿಳಿದುಬಂದಿದ್ದು ಇದರ ಬಗ್ಗೆ ಪೂರ್ಣ ತನಿಖೆಯಾಗಬೇಕು ಈ ಬಗ್ಗೆ ಹೊರಡಿಸಿರುವ ವಿಜೇತರ ಪಟ್ಟಿಯನ್ನು ತಡೆಹಿಡಿಯಬೇಕು ಹಾಗು ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ತಮ್ಮ ಪಾತ್ರದ ಫೋಟೋವನ್ನು ಕೂಡ ಹಂಚಿಕೊಂಡಿದ್ದು ಮುಖ್ಯಮಂತ್ರಿ, ಮತ್ತು ಮುಖ್ಯ ಕಾರ್ಯದರ್ಶಿ ಅವರನ್ನು ಟ್ಯಾಗ್ ಮಾಡಿದ್ದಾರೆ.

ಏನಿದು ಪ್ರಕರಣ:
ರಾಜ್ಯದ ಎಲ್ಲೆಡೆ ಇರುವ ನವೋದ್ಯಮಗಳಿಗೆ ಸಮಗ್ರ ಉದ್ಯಮಶೀಲತೆಯ ವೇದಿಕೆ ಒದಗಿಸುವುದು ಜೈವಿಕ ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನ ಇಲಾಖೆಯ ‘ಎಲಿವೇಟ್‌’ ಕಾರ್ಯಕ್ರಮದ ಮೂಲ ಉದ್ದೇಶ. ಹೀಗಿದ್ದರೂ ಇದು ಕರ್ನಾಟಕದ ಉದ್ಯೋಗಿಗಳಿಗೆ ಈ ಅವಕಾಶವನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ‘ಎಲಿವೇಟ್‌’ ಕಾರ್ಯಕ್ರಮದ ಮೂಲಕ ₹62 ಕೋಟಿ ನಿಧಿ ನೆರವನ್ನು 264 ನವೋದ್ಯಮಗಳು ಪಡೆದಿವೆ ಅವುಗಳಲ್ಲಿ ಬಹುತೇಕವು ಹೊರರಾಜ್ಯದ ಕಂಪನಿಗಳೇ ಆಗಿವೆ.

ಕರ್ನಾಟಕದ ದುಡ್ಡು ಹೊರರಾಜ್ಯಗಳ ಜಾತ್ರೆ ಎನ್ನುವ ಹಾಗೆ ಎಲಿವೇಟ್ ಕಾರ್ಯಕ್ರಮ ರೂಪುಗೊಂಡಿದೆ , ದೇಶದ ಯಾವುದೇ ರಾಜ್ಯದಲ್ಲಿ ನವೋದ್ಯಮಗಳಿಗೆ ಫಂಡಿಂಗ್ ನೀಡುವ ಪ್ರಕ್ರಿಯೆ ಜಾರಿಯಿಲ್ಲ ಆದ್ರೆ ಹೊರರಾಜ್ಯದ ಯಾವುದೇ ಕಂಪನಿಗಳು ಬಂದು ಇಲ್ಲಿ ನೊಂದಣಿ ಮಾಡಿಸಿ ‘ಎಲಿವೇಟ್‌’ ಕಾರ್ಯಕ್ರಮದ ಮೂಲಕ ತಮ್ಮ ಕಂಪನಿಗಳಿಗೆ ಹಣ ಪಡೆಯಬಹುದಾಗಿದೆ. ಈ ಅನ್ಯಾಯ ತಕ್ಷಣ ಸರಿಪಡಿಸಬೇಕೆಂದು ‘ಸಾಮಾನ್ಯ ಕನ್ನಡಿಗ’ ತಂಡದ ನೇತೃತ್ವದಲ್ಲಿ ಟ್ವಿಟ್ಟರ್ ಅಭಿಯಾನ ಆರಂಭವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top