fbpx
ಸಮಾಚಾರ

ಕರ್ನಾಟಕ ಸ್ಟಾರ್ಟ್ಅಪ್ ಇಲಾಖೆ ವಿರುದ್ಧ #BanElevate #ElevateMosa ಟ್ವಿಟ್ಟರ್ ಅಭಿಯಾನ.

ರಾಜ್ಯದ ಎಲ್ಲೆಡೆ ಇರುವ ನವೋದ್ಯಮಗಳಿಗೆ ಸಮಗ್ರ ಉದ್ಯಮಶೀಲತೆಯ ವೇದಿಕೆ ಒದಗಿಸುವುದು ಜೈವಿಕ ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನ ಇಲಾಖೆಯ ‘ಎಲಿವೇಟ್‌’ ಕಾರ್ಯಕ್ರಮದ ಮೂಲ ಉದ್ದೇಶ. ಹೀಗಿದ್ದರೂ ಇದು ಕರ್ನಾಟಕದ ಉದ್ಯೋಗಿಗಳಿಗೆ ಈ ಅವಕಾಶವನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ‘ಎಲಿವೇಟ್‌’ ಕಾರ್ಯಕ್ರಮದ ಮೂಲಕ ₹62 ಕೋಟಿ ನಿಧಿ ನೆರವನ್ನು 264 ನವೋದ್ಯಮಗಳು ಪಡೆದಿವೆ ಅವುಗಳಲ್ಲಿ ಬಹುತೇಕವು ಹೊರರಾಜ್ಯದ ಕಂಪನಿಗಳೇ ಆಗಿವೆ.

ಕರ್ನಾಟಕದ ದುಡ್ಡು ಹೊರರಾಜ್ಯಗಳ ಜಾತ್ರೆ ಎನ್ನುವ ಹಾಗೆ ಎಲಿವೇಟ್ ಕಾರ್ಯಕ್ರಮ ರೂಪುಗೊಂಡಿದೆ , ದೇಶದ ಯಾವುದೇ ರಾಜ್ಯದಲ್ಲಿ ನವೋದ್ಯಮಗಳಿಗೆ ಫಂಡಿಂಗ್ ನೀಡುವ ಪ್ರಕ್ರಿಯೆ ಜಾರಿಯಿಲ್ಲ ಆದ್ರೆ ಹೊರರಾಜ್ಯದ ಯಾವುದೇ ಕಂಪನಿಗಳು ಬಂದು ಇಲ್ಲಿ ನೊಂದಣಿ ಮಾಡಿಸಿ ‘ಎಲಿವೇಟ್‌’ ಕಾರ್ಯಕ್ರಮದ ಮೂಲಕ ತಮ್ಮ ಕಂಪನಿಗಳಿಗೆ ಹಣ ಪಡೆಯಬಹುದಾಗಿದೆ.

ರಾಜ್ಯದ ಐಟಿ ಕ್ಷೇತ್ರದಲ್ಲಿ ಯುವ ಉದ್ಯೋಗಿಗಳಿಗೆ ಉತ್ತೇಜನ ನೀಡಲು ರೂಪಿಸಿರುವ ಎಲಿವೇಟ್‌-100 ಯೋಜನೆಯಲ್ಲಿ ಹೈದರಾಬಾದ್‌-ಕರ್ನಾಟಕದ ಯುವ ಉದ್ಯಮಿಗಳಿಗೆ ಅರ್ಹತೆ ಇದ್ದರೂ ಅನರ್ಹಗೊಳಿಸಿ ಎಸಗಲಾಗುತ್ತಿರುವ ಅನ್ಯಾಯ ತಕ್ಷಣ ಸರಿಪಡಿಸಬೇಕೆಂದು ‘ಸಾಮಾನ್ಯ ಕನ್ನಡಿಗ’ ತಂಡದ ನೇತೃತ್ವದಲ್ಲಿ ಟ್ವಿಟ್ಟರ್ ಅಭಿಯಾನ ಆರಂಭವಾಗುತ್ತಿದೆ.

#BanElevate #ElevateMosa ಎಂಬ ಹ್ಯಾಶ್ ಟ್ಯಾಗ್ ಮೂಲಕ ಎಲಿವೇಟ್ ಮೋಸದ ವಿರುದ್ಧ ಧ್ವನಿಯೆತ್ತಲು ಇಂದು ಸಂಜೆ 4 ಗಂಟೆಗೆ ಟ್ವಿಟ್ಟರ್ ಅಭಿಯಾನ ನಡೆಯುತ್ತಿದೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯದ ವಿರುದ್ಧ ನೀವು ಕೂಡ ಧ್ವನಿಯೆತ್ತಬೇಕು ಎಂದುಕೊಂಡರೆ ಈ ಟ್ವಿಟ್ಟರ್ ಅಭಿಯಾನದಲ್ಲಿ ಭಾಗವಹಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top