fbpx
ಸಮಾಚಾರ

ತಂದೆ ಸಿದ್ದಾರ್ಥ್ ಸಾವಿನ ಬಗ್ಗೆ ಪುತ್ರನ ಬಳಿ ಮೊದಲೇ ಸುಳಿವು ನೀಡಿದ್ದ ವಿನಯ್ ಗುರೂಜಿ?

ಸಿದ್ದಾರ್ಥ ಯಾವುದೋ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರು ಎಂಬುದು ಎಸ್​ಎಂಕೆ ಕುಟುಂಬಕ್ಕೆ ಗೊತ್ತಿತ್ತು. ಹೀಗಾಗಿ ಸಿದ್ದಾರ್ಥ ಕುಟುಂಬ ಅಂದ್ರೆ ಸಿದ್ದಾರ್ಥ ಅತ್ತೆ ಎಸ್​ಎಂಕೆ ಪತ್ನಿ ಪ್ರೇಮಾ ಹಾಗೂ ಸಿದ್ದಾರ್ಥ ಪುತ್ರ ಅಮೃರ್ಥ್ಯ ಆಧ್ಯಾತ್ಮಿಕ ಚಿಂತಕ ಹಾಗೂ ಅವಧೂತ ವಿನಯ್ ಗುರೂಜಿಯವರನ್ನು ಭೇಟಿ ಮಾಡಿದ್ದರಂತೆ. ತಂದೆ ಏನೋ ಸಮಸ್ಯೆ ಇದೆ. ಹೀಗಾಗಿ ಗಮನಹರಿಸು ಎಂದು ವಿನಯ್ ಗುರೂಜಿ ಹಿರಿಯ ಪುತ್ರ ಅಮರ್ತ್ಯಗೆ ಸೂಚನೆ ಕೊಟ್ಟಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಡಾಲರ್ಸ್ ಕಾಲೋನಿಯ ಭಕ್ತರೊಬ್ಬರ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ತಮ್ಮ ತಂದೆ ಒತ್ತಡ ಹಾಗೂ ವ್ಯವಹಾರಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಆಗ ಯಾವುದೇ ಕಾರಣಕ್ಕೂ ತಂದೆಯನ್ನು ಬಿಟ್ಟಿರಬೇಡ, ಅವರ ಜೊತೆಯಲ್ಲೇ ಇರು. ಈ ಸಮಯದಲ್ಲಿ ನೀನು ಅವರಿಗೆ ಸಾಥ್ ಕೊಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ತಂದೆ ತುಂಬಾ ಒತ್ತಡದಲ್ಲಿದ್ದಾರೆ. ನಿಮ್ಮ ತಂದೆಯ ಜವಾಬ್ದಾರಿ ನಿನಗೆ ಸಿಗುತ್ತದೆ. ನಿನ್ನ ತಂದೆಯನ್ನು ಚೆನ್ನಾಗಿ ನೋಡಿಕೋ ಎಂದು ವಿನಯ್​ ಗುರೂಜಿ ಹೇಳಿದ್ದರಂತೆ. ಹಾಗೆಯೇ ಮತ್ತೊಬ್ಬರು ಗುರೂಜಿ ಅವರಿಗೆ ಫೋನ್​ ಮಾಡಿದಾಗ ನೀರು ಕಾಣುತ್ತಿದೆ… ಅಪಾಯದಲ್ಲಿದ್ದಾರೆ… ಎಂದು ಎಚ್ಚರಿಸಿದ್ದರು ಎಂದು ಹೇಳಲಾಗುತ್ತಿದೆ.

ಬರೀ ನೀರು ಕಾಣಿಸ್ತಿದೆ:
ಸಿದ್ಧಾರ್ಥ್ ನಾಪತ್ತೆಯಾಗುತ್ತಿದ್ದಂತೆಯೇ ಸೋಮವಾರ ತಡರಾತ್ರಿ ಎಸ್ ಎಂ ಕೃಷ್ಣ ಪತ್ನಿ ಪ್ರೇಮ ಕೃಷ್ಣ ಅವರು ವಿನಯ್ ಗುರೂಜಿಗೆ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಗುರೂಜಿಯವರು, ನನಗೆ ಬರೀ ನೀರು ಮಾತ್ರ ಕಾಣಿಸುತ್ತಿದೆ. ಬೇರೇನೂ ಕಾಣಿಸುತ್ತಿಲ್ಲ ಎಂದು ಹೇಳಿದ್ದರಂತೆ.

ಅಂದಹಾಗೆ ಸೋಮವಾರ ರಾತ್ರಿ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ಧಾರ್ಥ್, ಸುಮಾರು 36 ಗಂಟೆಗಳ ಶೋಧ ಕಾರ್ಯದ ನಂತರ ಇಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ಸಿದ್ಧಾರ್ಥ್ ಶವ ದೊರೆತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top