fbpx
ಸಮಾಚಾರ

ಮೋದಿ ಸರ್ಕಾರದಿಂದ ಮುಸ್ಲೀಂ ವಿದ್ಯಾರ್ಥಿಗಳಿಗೆ 80% ವಿದ್ಯಾರ್ಥಿವೇತನ ಮಂಜೂರು!

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2018-19 ರ ಸಾಲಿನಲ್ಲಿ ತನ್ನ 20 ಯೋಜನೆಗಳ ಅನುಸಾರ ನೀಡುವ ವಿದ್ಯಾರ್ಥಿ ವೇತನಗಳಲ್ಲಿ ಶೇ.80 ರಷ್ಟು ಮುಸ್ಲಿಮ್ ವಿದ್ಯಾರ್ಥಿಗಳ ಪಾಲಾಗಿದೆ. ಹೌದು ರಾಷ್ಟ್ರೀಯ ವಿದ್ಯಾರ್ಥಿ ವೇತನ ವೆಬ್ ಸೈಟ್ ನಲ್ಲಿರುವ ಮಾಹಿತಿಯ ಪ್ರಕಾರ ಮುಸ್ಲಿಮ್ ವಿದ್ಯಾರ್ಥಿಗಳಿಗೆ 80%, ಕ್ರೈಸ್ತ ವಿದ್ಯಾರ್ಥಿಗಳಿಗೆ 7.5%, ಸಿಖ್ಖ್ ವಿದ್ಯಾರ್ಥಿಗಳಿಗೆ 5%, ಹಿಂದೂ ವಿದ್ಯಾರ್ಥಿಗಳಿಗೆ 4.7% ವಿದ್ಯಾರ್ಥಿ ವೇತನ ನೀಡಲಾಗಿದೆ.

ವೆಬ್ ಸೈಟ್ ಮೂಲಕ 1.4 ಕೋಟಿ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದ್ದು, ಇದರಲ್ಲಿ 1.08 ವಿದ್ಯಾರ್ಥಿಗಳಿಗೆ ಈ ಬಾರಿ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಪೈಕಿ 88 ಲಕ್ಷ ಮುಸ್ಲಿಮರು, 8.26 ಲಕ್ಷ ಕ್ರೈಸ್ತ, 5.45 ಲಕ್ಷ ಸಿಖ್ಖ್, 5.2 ಲಕ್ಷ ಹಿಂದೂ, 1.94 ಲಕ್ಷ ಬೌದ್ಧ ಹಾಗೂ 1.07 ಲಕ್ಷ ಜೈನ ವಿದ್ಯಾರ್ಥಿಗಳು ಸೇರಿದ್ದಾರೆ..

ಇನ್ನು ವಿದ್ಯಾರ್ಥಿ ವೇತನಕ್ಕಾಗಿ ಒಟ್ಟು 2,157 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಬರೋಬ್ಬರಿ 1,032 ಕೋಟಿ ಮುಸ್ಲಿಮ್ ವಿದ್ಯಾರ್ಥಿಗಳ ಪಾಲಾಗಿದೆ. ಅಂದಹಾಗೆ ಕೇಂದ್ರದ 14 ಸಚಿವಾಲಯದ ಇಲಾಖೆಗಳಿಂದ ನಿಗದಿತ ಪ್ರಮಾಣದಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top