fbpx
ಸಮಾಚಾರ

ರಾಮನಗರದಲ್ಲಿ ದರ್ಶನ್ ಹಾಡು ಬ್ಯಾನ್ ಮಾಡಿದ ಬಗ್ಗೆ ನಿಖಿಲ್ ಹೇಳಿದ್ದೇನು ಗೊತ್ತಾ?

ಇತ್ತೀಚಿಗಷ್ಟೇ ನಡೆದ ರಾಮನಗರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ದರ್ಶನ್ ಸಿನಿಮಾದ ಹಾಡು ಹಾಡನ್ನು ಹಾಡಿರಲಿಲ್ಲ.., ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಬಗ್ಗೆ ಸ್ವತಃ ನಿಖಿಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ನಡೆಸಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಿಖಿಲ್ ಕುಮಾರ್ “ನಮ್ಮ ತಂದೆಯವರದ್ದೂ ಚಿತ್ರರಂಗಕ್ಕೆ ಸಣ್ಣ ಪುಟ್ಟ ಕೊಡುಗೆ ಇದೆ. ದೊಡ್ಡ ಕೊಡುಗೆ ಎಂದು ನಾನು ಹೇಳುವುದಿಲ್ಲ, ಅವರೂ ಹೇಳುವುದಿಲ್ಲ. ಹೀಗಿಗಾ, ಹಾಡು ಹಾಡಬೇಡಿ ಎಂದು ಸಣ್ಣ ತನ ನಾವು ಮಾಡಿಲ್ಲ. ಅಂತಹ ಗುಣ ನಮ್ಮಲ್ಲಿ ಇಲ್ಲ. ಅವರ ಹಾಡನ್ನು ಹಾಡಬೇಡಿ ಎಂದು ನಾವು ಹೇಳಿದ್ದೇವೆ ಎನ್ನುವ ಸುದ್ದಿ ಹೇಗೆ ಬಂತು ಎಂಬುದು ಗೊತ್ತಿಲ್ಲ.”

ರಾಮನಗರದಲ್ಲಿ ನಾವು ದರ್ಶನ್ ಹಾಗೂ ಯಶ್ ಹಾಡು ಬ್ಯಾನ್ ಮಾಡಿಲ್ಲ .ಇದು ತಪ್ಪು ಸಂದೇಶ.. ನಾನು ಯಾರಿಂದ ಬೇಕಾದರೂ ಇದಕ್ಕೆ ಸ್ಪಷ್ಟನೆ ಕೊಡಲು ರೆಡಿಯಿದ್ದೇನೆ. ದರ್ಶನ್ ತುಂಬಾ ದೊಡ್ಡ ಕಲಾವಿದರು ಅವರನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ಅಂದಹಾಗೆ ಈ ಸಮಾರಂಭದಲ್ಲಿ ದರ್ಶನ್ ಹಾಡು ಹಾಡುವಂತೆ ಅಭಿಮಾನಿಗಳು ವಿಜಯ್ ಪ್ರಕಾಶ್ ಗೆ ಒತ್ತಾಯಿಸಿದರು. ಆದರೆ ಅವರು ಹಾಡಿರಲಿಲ್ಲ. ಇದಕ್ಕೆ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top