fbpx
ಸಮಾಚಾರ

ಅಪ್ಪನ ಜೊತೆಗಿನ ಸಿದ್ದಾರ್ಥ್ ಫೋಟೋ ವೈರಲ್

ಕಾಫಿ ಡೇ ಮಾಲೀಕ, ಸಾವಿರಾರು ಕೋಟಿ ಒಡೆಯ ವಿ.ಜಿ.ಸಿದ್ದಾರ್ಥ್ ಸಾವಿನಿಂದ ಚಿಕ್ಕಮಗಳೂರಿನಲ್ಲಿರುವ ಸಿದ್ದಾರ್ಥ್ ಅವರ ಚೇತನಹಳ್ಳಿ ಎಸ್ಟೇಟ್‍ನಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದ ಸದಸ್ಯರ ದುಃಖ ಹುಮ್ಮಳಿಸಿ ಬರುತ್ತಿದ್ದರೂ ಅದನ್ನು ತೋರಿಸಿಕೊಳ್ಳಲಾಗದೆ ಮೌನ ಮಡುಗಟ್ಟುವಂತಾಯಿತು. ಹಿಂದೂ ಸಂಪ್ರದಾಯದಂತೆ ಸಿದ್ದಾರ್ಥ್ ಅವರ ಆಸ್ಥಿಗಳನ್ನು ಇಂದು ಮುಂಜಾನೆ ಕುಟುಂಬ ಕೆಲ ಸದಸ್ಯರು ಸಂಗ್ರಹಿಸಿದರು. ಶುಕ್ರವಾರ ಆಸ್ಥಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ.

ಈ ಮಧ್ಯೆ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿರುವ ಅಪ್ಪ ಗಂಗಯ್ಯ ಹೆಗ್ಡೆ ಅವರ ಜೊತೆಗಿನ ಕೊನೆಯ ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ಅವರ ತಂದೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು, ಪಕ್ಕದಲ್ಲಿ ಅಪ್ಪ ತಮ್ಮೊಂದಿಗೆ ಮಾತನಾಡುತ್ತಿಲ್ಲ ಎಂದು ಚಿಂತೆಯಿಂದ ಸಿದ್ದಾರ್ಥ್ ಕೂತಿರುವಂತೆ ಕಾಣುತ್ತಿದೆ. ಈ ಫೋಟೋ ಎಲ್ಲರ ಮನಕಲಕುತ್ತಿದೆ.

ಅಂದಹಾಗೆ ಸೋಮವಾರ ರಾತ್ರಿ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ಧಾರ್ಥ್, ಸುಮಾರು 36 ಗಂಟೆಗಳ ಶೋಧ ಕಾರ್ಯದ ನಂತರ ಇಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ಸಿದ್ಧಾರ್ಥ್ ಶವ ದೊರೆತಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top