fbpx
ಸಮಾಚಾರ

ವಾಣಿ- ಹರಿಕೃಷ್ಣ ದಾಂಪತ್ಯದಲ್ಲಿ ಅಪಸ್ವರ? ಗಾಯಕಿ ಬದುಕೇ ಬೇಡ ಅಂದಿದ್ಯಾಕೆ?

ಸ್ಯಾಂಡಲ್ವುಡ್ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ವಾಣಿ ದಾಂಪತ್ಯ ಜೀವನದಲ್ಲಿ ಮುನಿಸು ಕಾಣಿಸಿಕೊಂಡಿದೆ ಎಂಬ ಗುಸು ಗುಸು ಕೇಳಿಬರುತ್ತಿವೆ. ಪುಷ್ಠಿ ನೀಡುವಂತೆ ಹರಿಕೃಷ್ಣ ಅವರ ಪತ್ನಿ ಗಾಯಕಿ ವಾಣಿ ಹರಿಕೃಷ್ಣ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ.

 

 

ಕುರುಕ್ಷೇತ್ರ ಮತ್ತು ರಾಂಧವ ಚಿತ್ರದಲ್ಲಿ ಹಾಡಿದ್ದ ವಾಣಿ ಹರಿಕೃಷ್ಣ ಅವರ ಹಾಡುಗಳನ್ನು ತೆಗೆದು ಹಾಕಲಾಗಿದೆ. ವಿ. ಹರಿಕೃಷ್ಣ ಅವರು ಕುರುಕ್ಷೇತ್ರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರದಲ್ಲಿ ಒಂದು ಹಾಡನ್ನು ವಾಣಿ ಅವರಿಂದ ಹಾಡಿಸಲಾಗಿತ್ತು. ಆದರೆ ಚಿತ್ರದ ಆಡಿಯೋ ಬಿಡುಗಡೆಯಾದ ನಂತರ ವಾಣಿ ಹಾಡಿದ್ದ ಹಾಡನ್ನು ಬೇರೆಯವರು ಹಾಡಿರುವುದು ಗೊತ್ತಾಗಿ ವಾಣಿ ಅವರು ಬೇಸರಗೊಂಡಿದ್ದರು.

ಇನ್ನು ರಾಂಧವ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಶಿಷ್ಯ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸಿದ್ದು ಈ ಚಿತ್ರದಲ್ಲೂ ವಾಣಿ ಅವರು ಹಾಡಿದ್ದ ಹಾಡನ್ನು ಕಿತ್ತು ಹಾಕಲಾಗಿದೆ. ಈ ಎರಡು ಘಟನೆಗಳಿಂದ ಬೇಸರಗೊಂಡಿರುವ ವಾಣಿ ಅವರು ಫೇಸ್ ಬುಕ್ ನಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.

 

 

“ಬದುಕೇ ಬೇಡ ಅನ್ನಿಸಿಬಿಡುತ್ತದೆ, ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ. ಈಗ ” ಕುರುಕ್ಷೇತ್ರ” ಹಾಗೂ ” ರಾಂಧವ” ಚಿತ್ರಗಳಲ್ಲಿ ನನ್ನನ್ನು ಹಾಡಿಸಿ, ಧ್ವನಿ ಉಳಿಸಿಲ್ಲ. ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ” ಎಂದು ವಾಣಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ್ರೆ ವಾಣಿ ನೊಂದು, ಬೇಸತ್ತು ಬರೆದ ಹಾಗಿದೆ.. ಈ ಘಟನೆ ಸದ್ಯ ಹರಿಕೃಷ್ಣ ದಾಂಪತ್ಯದಲ್ಲಿ ಮುನಿಸಿಗೆ ಕಾರಣವಾಗಿದೆಯಾ ಎಂಬ ಚರ್ಚೆ ಶುರುವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top