fbpx
ಸಮಾಚಾರ

500 ಕೋಟಿ ಬಜೆಟ್ ‘ರಾಮಾಯಣ’ದಲ್ಲಿ ಸೀತೆ ಪಾತ್ರ ಗಿಟ್ಟಿಸಿಕೊಂಡ ಬೆಂಗಳೂರು ಹುಡುಗಿ.

ಟಾಲಿವುಡ್‌ನ ಖ್ಯಾತ ನಿರ್ಮಾಪಕ ಹಾಗೂ ಗೀತಾ ಆರ್ಟ್ಸ್ ಮುಖ್ಯಸ್ಥರಾದ ಅಲ್ಲು ಅರವಿಂದ ರಾಮಾಯಣ ಕಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಕಾಣಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಬರೋಬ್ಬರಿ 500 ಕೋಟಿ ರೂ. ಹಾಕಿ ಅದ್ದೂರಿ ಮೇಕಿಂಗ್ ಮೂಲಕ ತೆರೆಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.

 

 

ಸೀತೆಯಾಗಿ ದೀಪಿಕಾ ಪಡುಕೋಣೆ:
‘ರಾಮಾಯಣ’ದ ಸೀತೆಯಾಗಿ ಮಿಂಚಲಿದ್ದಾಳೆ ಬೆಂಗಳೂರು ಡಿಂಪಲ್ ಹುಡುಗಿ. ಹೌದು, ಸೀತೆಯಾಗಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತೊಂದು ಬಿಟೌನ್ ನಲ್ಲಿ ಕೇಳಿಬರುತ್ತಿದೆ.ಒಂದು ವೇಳೆ ಇದು ನಿಜವಾದರೆ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುವ ಸಾಧ್ಯತೆ ಇದೆ. ಉಳಿದಂತೆ ಪಾತ್ರವರ್ಗ, ಇತರೆ ತಾಂತ್ರಿಕ ಬಳಗ, ಸಿನಿಮಾ ಚಿತ್ರೀಕರಣ ಮುಂತಾದ ಸಂಗತಿಗಳು ಶೀಘ್ರದಲ್ಲೇ ಹೊರಬೀಳಲಿದೆ.

ಇನ್ನು ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ದಂಗಲ್‌ ಚಿತ್ರದ ನಿರ್ದೇಶಕ ನಿತೀಶ್‌ ತಿವಾರಿ ಮತ್ತು ಮಾಮ್‌ ಚಿತ್ರದ ನಿರ್ದೇಶಕ ರವಿ ಉದ್ಯಾವರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮುಖ್ಯವಾಗಿ ಪಾತ್ರ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಂಡ ಚಿತ್ರತಂಡ ರಾಮನ ಪಾತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಂಡರೆ ಸೀತಾ ಪಾತ್ರದಲ್ಲಿ ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top