fbpx
ಸಮಾಚಾರ

ಮಹೇಶ್ ಬಾಬುಗಾಗಿ ಮಾಡಿದ್ದ ಕಥೆ ಯಶ್ ಪಾಲು -KGF ನಂತರ ತೆಲುಗಿನ ಸ್ಟಾರ್​ ನಿರ್ದೇಶಕನೊಂದಿಗೆ ಯಶ್ ಸಿನಿಮಾ.

ಕೆ.ಜಿ.ಎಫ್ ಚಾಪ್ಟರ್-2′ ನಂತರ ಯಶ್​ ಯಾವ ಸಿನಿಮಾ ಮಾಡಲಿದ್ದಾರೆ ಅನ್ನೋದು ಅವರ ಅಭಿಮಾನಿಗಳಲ್ಲಿರುವ ಪ್ರಶ್ನೆ? ಈ ಪ್ರಶ್ನೆಗೆ ಉತ್ತರ ಎಂಬಂತೆ ಪ್ರಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಜನ ಗಣ ಮನ’ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಇವರ ನಡುವೆ ಎರಡು ಸುತ್ತಿನ ಮಾತುಕತೆಯೂ ನಡೆದಿದ್ದು, ಯಶ್​ ಸಿನಿಮಾಗೆ ಹಸಿರು ನಿಶಾನೆ ತೋರಿದ್ದಾರಂತೆ.

ವಿಶೇಷ ಅಂದರೆ ಯಶ್​ ಹಾಗೂ ಪೂರಿ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಾಣಲಿದೆಯಂತೆ. ಅಂದರೆ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳದಲ್ಲೂ ಇದನ್ನು ಡಬ್​ ಮಾಡುವ ಯೋಜನೆ ಇದೆಯಂತೆ. 2020ರಲ್ಲಿ ಅಂದರೆ ‘ಕೆಜಿಎಫ್ ಚಾಪ್ಟರ್​ 2’ ಚಿತ್ರೀಕರಣ ಮುಗಿದ ನಂತರ ಯಶ್ ಜೊತೆಗಿನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರಂತೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗಾಗಿ ಪೂರಿ ಜಗನ್ನಾಥ್ ಒಂದು ಕಥೆ ಮಾಡಿದ್ದರು. ‘ಪೋಕರಿ’ ಹಾಗೂ ‘ಬಿಜಿನೆಸ್ ಮ್ಯಾನ್’ ಚಿತ್ರಗಳ ಬಳಿಕ ಬರುತ್ತಿದ್ದ ಹ್ಯಾಟ್ರಿಕ್ ಸಿನಿಮಾ ಇದಾಗಿತ್ತು. ಆ ಸಿನಿಮಾಗೆ ‘ಜನ ಗಣ ಮನ’ ಎಂಬ ಶೀರ್ಷಿಕೆ ಇಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಮಹೇಶ್ ಬಾಬು ಚಿತ್ರದಿಂದ ಹೊರ ನಡೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top