fbpx
ಸಮಾಚಾರ

ದಾಂಪತ್ಯದಲ್ಲಿ ಬಿರುಕು ವಿಚಾರ: ಕೊನೆಗೂ ಸ್ಪಷ್ಟನೆ ಕೊಟ್ಟ ವಿ.ಹರಿಕೃಷ್ಣ

ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ತಮ್ಮ ಪತ್ನಿ ವಾಣಿ ‘ಫೇಸ್‌ಬುಕ್’ನಲ್ಲಿ ಮಾಡಿದ್ದ ಪೋಸ್ಟ್ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. “ನಮ್ಮಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿಯಾಗಿರುವುದು ಸುಳ್ಳು ಮತ್ತು ಸತ್ಯಕ್ಕೆ ದೂರವಾದುದು. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಅವಳು ಹಾಡಿದ್ದ ಹಾಡನ್ನು ಮತ್ತೆ ಬೇರೆಯವರು ಹಾಡಿದ್ದಕ್ಕೆ ಬೇಸರವಾಗಿ ‘ಫೇಸ್‌ಬುಕ್’ನಲ್ಲಿ ಮಾಡಿದ್ದಾಳೆ ಅಷ್ಟೇ” ಎಂದಿದ್ದಾರೆ.

ಫೇಸ್‌ಬುಕ್’ನಲ್ಲಿ ಮಾಡಿದ ಪೋಸ್ಟ್ ಏನೇನೋ ಟರ್ನ್ ತೆಗೆದುಕೊಂಡು ಸತ್ಯಕ್ಕೆ ದೂರವಾದ ಸುದ್ದಿ ಹಬ್ಬಿಬಿಟ್ಟಿದೆ. ನಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಹಬ್ಬುತ್ತಿದೆ. ಇವೆಲ್ಲ ಕಪೋಲ ಕಲ್ಪಿತ ಸುದ್ದಿಗಳು. ವಾಣಿ ಫೇಸ್ಬುಕ್ ಪೋಸ್ಟ್ ವೃತ್ತಿಗೆ ಸಂಬಂಧಿಸಿ ಹೊರಹಾಕಿದ ಬೇಸರ ಅಷ್ಟೇ. ಅದನ್ನು ಸಂಸಾರಕ್ಕೆ ಎಳೆದು ತಂದು ಸುಳ್ಳು ಸುದ್ದಿ ಮಾಡಲಾಗಿದೆ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಏನಿದು ವಿವಾದ:
ಕುರುಕ್ಷೇತ್ರ ಮತ್ತು ರಾಂಧವ ಚಿತ್ರದಲ್ಲಿ ಹಾಡಿದ್ದ ವಾಣಿ ಹರಿಕೃಷ್ಣ ಅವರ ಹಾಡುಗಳನ್ನು ತೆಗೆದು ಹಾಕಲಾಗಿದೆ. ವಿ. ಹರಿಕೃಷ್ಣ ಅವರು ಕುರುಕ್ಷೇತ್ರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರದಲ್ಲಿ ಒಂದು ಹಾಡನ್ನು ವಾಣಿ ಅವರಿಂದ ಹಾಡಿಸಲಾಗಿತ್ತು. ಆದರೆ ಚಿತ್ರದ ಆಡಿಯೋ ಬಿಡುಗಡೆಯಾದ ನಂತರ ವಾಣಿ ಹಾಡಿದ್ದ ಹಾಡನ್ನು ಬೇರೆಯವರು ಹಾಡಿರುವುದು ಗೊತ್ತಾಗಿ ವಾಣಿ ಅವರು ಬೇಸರಗೊಂಡಿದ್ದರು.

ಇನ್ನು ರಾಂಧವ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಶಿಷ್ಯ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸಿದ್ದು ಈ ಚಿತ್ರದಲ್ಲೂ ವಾಣಿ ಅವರು ಹಾಡಿದ್ದ ಹಾಡನ್ನು ಕಿತ್ತು ಹಾಕಲಾಗಿದೆ. ಈ ಎರಡು ಘಟನೆಗಳಿಂದ ಬೇಸರಗೊಂಡಿರುವ ವಾಣಿ ಅವರು ಫೇಸ್ ಬುಕ್ ನಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.

 

 

“ಬದುಕೇ ಬೇಡ ಅನ್ನಿಸಿಬಿಡುತ್ತದೆ, ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ. ಈಗ ” ಕುರುಕ್ಷೇತ್ರ” ಹಾಗೂ ” ರಾಂಧವ” ಚಿತ್ರಗಳಲ್ಲಿ ನನ್ನನ್ನು ಹಾಡಿಸಿ, ಧ್ವನಿ ಉಳಿಸಿಲ್ಲ. ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ” ಎಂದು ವಾಣಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ್ರೆ ವಾಣಿ ನೊಂದು, ಬೇಸತ್ತು ಬರೆದ ಹಾಗಿದೆ.. ಈ ಘಟನೆ ಸದ್ಯ ಹರಿಕೃಷ್ಣ ದಾಂಪತ್ಯದಲ್ಲಿ ಮುನಿಸಿಗೆ ಕಾರಣವಾಗಿದೆಯಾ ಎಂಬ ಚರ್ಚೆ ಶುರುವಾಗಿತ್ತು”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top