fbpx
ಸಮಾಚಾರ

ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್, ಸುದೀಪ್, ಪುನೀತ್ ರನ್ನು ಹಿಂದೆ ಹಾಕಿದ ರಾಕಿಂಗ್ ಸ್ಟಾರ್ ಯಶ್!

ರಾಕಿಂಗ್ ಸ್ಟಾರ್ ಯಶ್ ಇನ್ಸ್ಟಾಗ್ರಾಮ್ ನಲ್ಲಿ ಕನ್ನಡದ ಇತರ ನಟರಾದ ದರ್ಶನ್, ಸುದೀಪ್, ಪುನೀತ್ ರನ್ನು ಹಿಂದೆ ಹಾಕಿದ್ದಾರೆ. ಹೌದು ಕಳೆದ ವರ್ಷ ಡಿಸೆಂಬರ್​ನಲ್ಲಿ ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದ ದಿ ನೇಮ್ ಈಸ್ ಯಶ್ ಇದೀಗ 10 ಲಕ್ಷ ಫಾಲೋವರ್ಸ್​ ಹೊಂದುವ ಮೂಲಕ ಮೈಲಿಗಲ್ಲು ನಿರ್ಮಿಸಿದ್ದಾರೆ.

ಸಾಮಾನ್ಯವಾಗಿ ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಶೇರ್ ಮಾಡಿಕೊಳ್ಳುವ ಯಶ್​ಗೆ 10 ಲಕ್ಷ ಫಾಲೋವರ್ಸ್​ ಇದ್ದರೂ, ಯಶ್ ಫಾಲೋ ಮಾಡುತ್ತಿರುವುದು ಒಬ್ಬರನ್ನ ಮಾತ್ರ. ಅದು ಅವರ ಮಡದಿ ರಾಧಿಕಾ ಪಂಡಿತ್. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೂಡ ನಮ್ದೆ ಹವಾ ಅಂತಿದ್ದಾರೆ ರಾಕಿಭಾಯ್ ಅಭಿಮಾನಿಗಳು

ಉಳಿದಂತೆ ಇನ್ಸ್ಟಾಗ್ರಾಮ್ ನಲ್ಲಿ ನಟ ದರ್ಶನ್ 261K, ಸುದೀಪ್ 447K ಹಾಗೂ ಪುನೀತ್ ರಾಜ್ ಕುಮಾರ್ 717K ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಯಶ್ ನಂತರ ಸ್ಥಾನದಲ್ಲಿ ಈ ನಟರು ಇದ್ದಾರೆ.. ಅಂದಹಾಗೆ ನಟಿ ರಶ್ಮಿಕಾ ಮಂದಣ್ಣ ಅವರು 28 ಲಕ್ಷ ಹಿಂಬಾಲಕರನ್ನು ಹೊಂದಿದ್ದು ಕನ್ನಡ ಚಿತ್ರರಂಗದ ಮಟ್ಟಿಗೆ ರಶ್ಮಿಕಾ ಅತಿ ಹೆಚ್ಚು ಫಾಲೋಯರ್ಸ್ ಗಳನ್ನು ಹೊಂದಿದ ತಾರೆಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top