fbpx
ಸಮಾಚಾರ

ಮಿಸ್​ ಇಂಗ್ಲೆಡ್​ ಕಿರೀಟ ಮುಡಿಗೇರಿಸಿಕೊಂಡ ಭಾರತ ಮೂಲದ ವೈದ್ಯೆ

23 ವರ್ಷದ ಭಾರತೀಯ ಮೂಲದ ವೈದ್ಯೆಯೊಬ್ಬರು ಮಿಸ್ ಇಂಗ್ಲೆಂಡ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂಗ್ಲೆಂಡ್‍ನ ಡರ್ಬಿ ನಗರದಲ್ಲಿ ವಾಸವಾಗಿರುವ ಭಾರತೀಯ ಮೂಲದ ಯುವತಿ ಭಾಷಾ ಮುಖರ್ಜಿ 12 ಜನ ಸ್ಪರ್ಧಾಳುಗಳು ಇದ್ದರೂ 2019ರ ಮಿಸ್ ಇಂಗ್ಲೆಂಡ್ ಆಗಿ ಆಯ್ಕೆಯಾಗಿದ್ದಾರೆ.

 

 

ಮಿಸ್​ ಇಂಗ್ಲೆಡ್​ ಪ್ರಶಸ್ತಿ ಭಾಜನಾರಾಗಿರುವ ಮುಖರ್ಜಿ ಈ ಮೂಲಕ ಮಿಸ್​ ವರ್ಲ್ಡ್​ ಸ್ಪರ್ಧೆಗೆ ಪ್ರವೇಶ ಪಡೆಯುವ ಜೊತೆಗೆ ರಜೆಯ ಮಜಾ ಸವಿಯಲು ಮರಿಷಿಯಸ್​ ಹೋಗುವ ಚಾನ್ಸ್​ ಕೂಡ ಪಡೆದಿದ್ದಾರೆ. ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ಮುಖರ್ಜಿ, ದಕ್ಷಿಣ ಏಷ್ಯಾ ಸಮುದಾಯ ಹಾಗೂ ಅಲ್ಪಾಸಂಖ್ಯಾತ ಡೆರ್ಬಿ ಪ್ರದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ಸಂತಸವಾಗಿದೆ ಎಂದಿದ್ದಾರೆ.

ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಬಳಿಕ ಮಾತನಾಡಿದ ಅವರು ನಾವು ಬಹಳ ಮಂದಿ ಗಾಳಿಯಲ್ಲಿ ವಿಹರಿಸುತ್ತಾ ಏನೇನೊ ಕನಸು ಕಂಡು ಯಾರನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳಬಾರದು ಎಂದುಕೊಳ್ಳುತ್ತೇವೆ. ಆದರೆ, ಸಮಯ ಬಂದಾಗ, ವಿಶಿಷ್ಟ ಸಂದರ್ಭಗಳಲ್ಲಿ ನಾವು ಎಲ್ಲರಿಗೂ ಬೆಂಬಲವಾಗಿ ನಿಂತುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಜನಿಸಿದ ಭಾಷಾ ಮುಖರ್ಜಿ, 9ನೇ ವರ್ಷದ ಹುಡುಗಿಯಾಗಿದ್ದಾಗ ಅವರ ಕುಟುಂಬ ಇಂಗ್ಲೆಂಡ್‍ಗೆ ಶಿಫ್ಟ್ ಆಗಿತ್ತು. ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಭಾಷಾ ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಮಿಸ್ ಇಂಗ್ಲೆಂಡ್ ವಿಜೇತರಾಗಿರುವ ಮುಖರ್ಜಿ ಮಿಸ್ ವರ್ಲ್ಡ್ ಸ್ಪರ್ಧೆಗೆ ಪ್ರವೇಶ ಪಡೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top