fbpx
ಸಮಾಚಾರ

ಅರೇಬಿಕ್ ಬೋರ್ಡ್ ತೆಗೆಯುವಂತೆ ಸರ್ಕಾರದ ಹೊಸ ಆದೇಶ.

ಚೀನದ ಕಮ್ಯೂನಿಸ್ಟ್ ಸರ್ಕಾರ, ಅರೇಬಿಕ್ ಭಾಷೆಯಲ್ಲಿರುವ ಎಲ್ಲಾ ನಾಮಫಲಕಗಳನ್ನು ತೆರವುಗೊಳಿಸಲು ಸೂಚಿಸಿದೆ. ರಾಜಧಾನಿ ಬಿಜಿಂಗ್’ನಲ್ಲಿರುವ ಹೊಟೇಲ್’ಗಳಿಗೆ ಸರಕಾರ ಈ ಆದೇಶ ನೀಡಿದೆ. ಹೋಟೆಲ್ ನಾಮಫಲಕಗಳಲ್ಲಿ ಅರೇಬಿಕ್ ಭಾಷೆಯ ಪದಗಳು, ಇಸ್ಲಾಂಗೆ ಸಂಬಂಧಿಸಿದ ಚಿಹ್ನೆಗಳನ್ನು ತೆಗೆಯುವಂತೆ ಬಿಜಿಂಗ್ ಸ್ಥಳೀಯ ಆಡಳಿತ ಆದೇಶ ನೀಡಿದೆ. ಅಲ್ಲದೇ ಹಲಾಲ್ ಶಬ್ಧ ಬಳಸಲಾಗಿರುವ ಎಲ್ಲಾ ನಾಮಫಲಕಗಳನ್ನು ಬದಲಾಯಿಸುವಂತೆಯೂ ಆದೇಶದಲ್ಲಿ ತಿಳಿಸಿದೆ.

ಸುಮಾರು 20 ಮಿಲಿಯನ್ ಜಸಂಖ್ಯೆ ಹೊಂದಿರುವ ಚೀನಾದ ಮುಸ್ಲಿಂ ಸಮುದಾಯದ ಮೇಲೆ ಚೀನಾ ಸರ್ಕಾರ ಕಣ್ಣಿಟ್ಟಿದ್ದು, ಇಸ್ಲಾಂ ಮೂಲಕ ವಿದೇಶಿ ಸಂಸ್ಕೃತಿ ದೇಶದೊಳಕ್ಕೆ ನುಸುಳುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿದೆ. ಮಸೀದಿಗಳ ಮೇಲಿನ ಡೋಮ್‌ ಮಾದರಿ ಆಕಾರಗಳನ್ನು ತೆಗೆದುಹಾಕುವುದು, ನೆಲಮಾಳಿಗೆಯಿದ್ದಂಥ ಚರ್ಚ್‌ಗಳನ್ನು ಮುಚ್ಚಿಸುವುದಕ್ಕೆ ಕೂಡ ಅಧಿಕಾರಿಗಳು ಮುಂದಾಗಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಆಡಳಿತದಲ್ಲಿ ವಿದೇಶಿ ಸಂಸ್ಕೃತಿಗಳನ್ನು ಹತ್ತಿಕ್ಕಲು ಹಲವು ಆದೇಶಗಳನ್ನು ಹೊರಡಿಸಲಾಗಿದೆ. ಇನ್ನು ಚೀನದ ಉಯಿಗರ್ ಮುಸ್ಲಿಂ ಹಾಗೂ ಸ್ಥಳೀಯ ಹಾನ್ ಸಮುದಾಯದ ನಡುವೆ ಬಿಕ್ಕಟ್ಟು ಉದ್ಭವಿಸಿದ ಕಾರಣ ಚೀನ ಈ ಕ್ರಮ ಕೈಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top