fbpx
ಸಮಾಚಾರ

ಕೆಜಿಎಫ್ ವಿತರಕ ನಟ ವಿಶಾಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್: ಕಾರಣವೇನು ಗೊತ್ತಾ?

ಕನ್ನಡದ ಕೆಜಿಎಫ್ ಚಿತ್ರವನ್ನು ತಮಿಳು ನಾಡಿನಲ್ಲಿ ರಿಲೀಸ್ ಮಾಡಿದ್ದ ನಟ ಕಮ್ ವಿತರಕ ವಿಶಾಲ್ ಅವರಿಗೆ ಸಂಕಷ್ಟ ಎದುರಾಗಿದೆ. ಚಿತ್ರ ನಿರ್ಮಾಣ ಸಂಸ್ಥೆ ವಿಶಾಲ್ ಫಿಲ್ಮ್ ಕಾರ್ಖಾನೆ ಐದು ವರ್ಷಗಳಿಂದಲೂ ಟಿಡಿಎಸ್ ಪಾವತಿಸದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ -11( ಎಸಿಎಂಎಂ-11) ಗೆ ಹಾಜರಾಗದ ಕಾಲಿವುಡ್ ನಟ ವಿಶಾಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿದೆ.

ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್‌ ಮಲರ್ಮತಿ ಅವರು ವಾರಂಟ್‌ ಜಾರಿಗೊಳಿಸಿ ಆದೇಶಿಸಿದ್ದಾರೆ. ವಿಶಾಲ್‌ ಫಿಲ್ಮ್‌ ಫ್ಯಾಕ್ಟರಿಯ 5 ವರ್ಷಗಳಿಂದ ಉದ್ಯೋಗಿಗಳ ವೇತನ ಖಾತೆಯಿಂದ ಮೂಲದಲ್ಲೇ ತೆರಿಗೆ ಮೊತ್ತವನ್ನು ಕಡಿತಗೊಳಿಸಿದ್ದರೂ ಆ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಿಲ್ಲ. ಹಾಗಾಗಿ 2017ರಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ವಿಶಾಲ್‌ಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಸಮನ್ಸ್‌ ಜಾರಿ ಮಾಡಿದರೂ ನ್ಯಾಯಾಲಯಕ್ಕೆ ಹಾಜರಾಗದ ವಿಶಾಲ್‌ ವಿರುದ್ಧ ನ್ಯಾಯಾಲಯ ಶುಕ್ರವಾರ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top