fbpx
ಸಮಾಚಾರ

ಕಾಫಿ ಪುಡಿಯಲ್ಲಿ ಅರಳಿದ ಸಿದ್ದಾರ್ಥ್ ಭಾವಚಿತ್ರ- ಕಲಾವಿದನ ವಿಡಿಯೋ ವೈರಲ್

ಕಾಫಿ ಕಿಂಗ್‌ ಸಿದ್ಧಾರ್ಥ ಹೆಗಡೆ ಈಗ ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಅವರನ್ನು ನೆನೆದು ಅಭಿಮಾನಿಗಳು ಹಿತೈಷಿಗಳು ಕಣ್ಣೀರಿಡುತ್ತಿದ್ದಾರೆ, ಅಲ್ಲದೆ ಅವರನ್ನು ತಮ್ಮದೇ ಆದ ರೀತಿಯಲ್ಲಿ ಸ್ಮರಿಸುತ್ತಿದ್ದಾರೆ. ತುಮಕೂರಿನ ಚಿತ್ರ ಕಲಾವಿದನೊಬ್ಬ ಕಾಫಿ ಪುಡಿ ಮೂಲಕ ವಿಭಿನ್ನವಾಗಿ ಅವರ ಚಿತ್ರವನ್ನ ಬರೆಯುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪರಮೇಶ್ ಇಂಟೀರಿಯರ್ ಡೆಕೋರೇಟರ್ ಸಿದ್ಧಾರ್ಥ್ ಹೆಗಡೆಯವರ ಭಾವಚಿತ್ರವನ್ನು ಕಾಫಿ ಪುಡಿ ಬಳಸಿ ತಯಾರಿಸಿರುವುದು ಗಮನ ಸೆಳೆದಿದ್ದಾರೆ.. ತುಮಕೂರು ನಗರದಲ್ಲಿರುವ ಕೆಫೆ ಕಾಫಿ ಡೇ ಗೆ ಬಂದ ಪರಮೇಶ್ ಅಲ್ಲಿನ ಸಿಬ್ಬಂದಿಯ ಅನುಮತಿಯ ಮೇರೆಗೆ ಅಲ್ಲಿಯೇ ಕಾಫಿ ಪುಡಿಯನ್ನು ಖರೀದಿ ಮಾಡಿ ಸಿದ್ಧಾರ್ಥ್ ಅವರ ಭಾವಚಿತ್ರವನ್ನು ರಚಿಸಿದ್ದಾರೆ.

ಅವರಿಗಾಗಿ ಒಂದು ಸಣ್ಣ ಅರ್ಪಣೆ ಮಾಡಬೇಕು ಎಂದು ವಿಶೇಷವಾಗಿ ಕಾಫಿಪುಡಿಯಲ್ಲಿ ಅವರ ಚಿತ್ರವನ್ನು ಬಿಡಿಸಿದ್ದೇನೆ ಎಂದು ಪರಮೇಶ್ ಹೇಳಿದ್ದಾರೆ. ಪರಮೇಶ್ ರಚಿಸಿರುವ ಭಾವಚಿತ್ರ ಸಿದ್ಧಾರ್ಥ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.ಸಿದ್ದಾರ್ಥ್ ಅವರ ಭಾವಚಿತ್ರವನ್ನು ಬಿಡಿಸಿರುವ ಕಲಾವಿದನ ವಿಡಿಯೋ ಇಲ್ಲಿ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top