fbpx
ಸಮಾಚಾರ

ಸಂಸತ್ತಿನಲ್ಲೇ ಜೆಡಿಎಸ್ ಶಾಸಕ ಪುಟ್ಟರಾಜು ವಿರುದ್ಧ ಹರಿಹಾಯ್ದ ಮಂಡ್ಯ ಸಂಸದೆ ಸುಮಲತಾ!

ಸಂಸತ್ತಿನಲ್ಲಿ ಮಂಡ್ಯ ಸಂಸದೆ ಸುಮಲತಾ ಪರೋಕ್ಷವಾಗಿ ಪುಟ್ಟರಾಜು ವಿರುದ್ಧ ಗುಡುಗಿದ್ದಾರೆ. ಹೌದು, ಅಣೆಕಟ್ಟು ಸುರಕ್ಷತಾ ಬಿಲ್​ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ ಸುಮಲತಾ ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟಿನ ಬಗ್ಗೆಯೂ ಚರ್ಚಿಸಿದ್ದಾರೆ. ಈ ಅಣೆಕಟ್ಟನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದಿರುವ ಅವರು, ಡ್ಯಾಮ್​ಗೆ ಗಣಿಗಾರಿಕೆಯಿಂದ ಅಪಾಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವೇಳೆ ಮಾತು ಮುಂದುವರೆಸಿದ ಸುಮಲತಾ “ಗಣಿಗಾರಿಕೆಯಿಂದ ಕೃಷ್ಣಾ ರಾಜ ಸಾಗರ ಅಣೆಕಟ್ಟಿಗೆ ಹಾನಿ ಉಂಟಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಅತಿಯಾದ ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು. ಈ ಮೂಲಕ ಮೈಸೂರು ಭಾಗದಲ್ಲಿ ಗಣಿಗಾರಿಕೆ ಕೆಲಸವನ್ನು ನಿಲ್ಲಿಸಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದು ಶಾಸಕ ಪುಟ್ಟರಾಜು ಅವರನ್ನೇ ಗುರಿಯಾಗಿಸಿಕೊಂಡು ಹೇಳಿದ ಮಾತು ಎಂದೇ ಬಿಂಬಿಸಲಾಗುತ್ತಿದೆ.. ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು ಅವರು ಕ್ರಷರ್ ಮಷಿನ್​ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಗಣಿಗಾರಿಕೆನಿಲ್ಲಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top