fbpx
ಸಮಾಚಾರ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಇಲ್ಲಿದೆ ಟೀಂ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ!

ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ವಿಶ್ವಕಪ್ ಮಾದರಿಯಲ್ಲಿ ಆಡುವ ಹಿನ್ನಲೆಯಲ್ಲಿ ಈಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಗಸ್ಟ್ ೧ ರಿಂದ ಪ್ರಾರಂಭವಾಗಿದೆ. ಆದರೆ ಇದು ವಿಶ್ವಕಪ್ ಟೂರ್ನಿ ಗಿಂತ ಭಿನ್ನವಾಗಿರುತ್ತದೆ. ವಿಶ್ವದ ಒಂಬತ್ತು ಅಗ್ರ ಶ್ರೇಯಾಂಕಿತ ತಂಡಗಳು ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿದ್ದು, ಎರಡು ವರ್ಷಗಳ ಅವಧಿಯಲ್ಲಿ ಪರಸ್ಪರ ಆಯ್ಕೆ ಮಾಡಿದ ಎದುರಾಳಿಗಳ ವಿರುದ್ಧ ಪ್ರತಿ ತಂಡವು ಆರು ಸರಣಿಗಳನ್ನು ಸ್ವದೇಶದಲ್ಲಿ ಆಡಲಿವೆ.

ಚಾಂಪಿಯನ್‌ಶಿಪ್‌ನ ಪ್ರತಿಯೊಂದು ಸರಣಿಯು120 ಪಾಯಿಂಟ್‌ಗಳ ಮೌಲ್ಯವನ್ನು ಹೊಂದಿರುತ್ತದೆ. ಆದ್ದರಿಂದ, ಒಂದು ತಂಡವು ಗರಿಷ್ಠ 720 ಅಂಕಗಳನ್ನು ಗಳಿಸಬಹುದು. 2021 ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅಗ್ರ ಎರಡು ತಂಡಗಳು ಸ್ಪರ್ಧಿಸಿ ಚಾಂಪಿಯನ್ ಆಗುತ್ತವೆ.

ಟೆಸ್ಟ್​ ಚಾಂಪಿಯನ್ ಶಿಪ್ ನಲ್ಲಿ ಭಾರತದ ವೇಳಾಪಟ್ಟಿ:

ವೆಸ್ಟ್​ ಇಂಡೀಸ್ vs ಭಾರತ: ಆಗಸ್ಟ್​-ಸಪ್ಟೆಂಬರ್ 2019 (ವೆಸ್ಟ್​ ಇಂಡೀಸ್​ನಲ್ಲಿ 2 ಪಂದ್ಯ)

ಭಾರತ vs ದಕ್ಷಿಣ ಆಫ್ರಿಕಾ: ಅಕ್ಟೋಬರ್ 2019 (ಭಾರತದಲ್ಲಿ 3 ಪಂದ್ಯ)

ಭಾರತ vs ಬಾಂಗ್ಲಾದೇಶ: ನವೆಂಬರ್ 2019 (ಭಾರತದಲ್ಲಿ 2 ಪಂದ್ಯ)

ನ್ಯೂಜಿಲೆಂಡ್​ vs ಭಾರತ: ಫೆಬ್ರವರಿ-ಮಾರ್ಚ್​ 2020 (ನ್ಯೂಜಿಲೆಂಡ್​ನಲ್ಲಿ 2 ಪಂದ್ಯ)

ಆಸ್ಟ್ರೇಲಿಯಾ vs ಭಾರತ: ನವೆಂಬರ್ 2020-ಜನವರಿ 2021 (ಆಸ್ಟ್ರೇಲಿಯಾದಲ್ಲಿ 4 ಪಂದ್ಯ)

ಭಾರತ vs ಇಂಗ್ಲೆಂಡ್: ಜನವರಿ-ಮಾರ್ಚ್​ 2021 (ಭಾರತದಲ್ಲಿ 5 ಪಂದ್ಯ)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top