fbpx
ಸಮಾಚಾರ

“ನಿನ್ನ ಕ್ರಿಕೆಟ್ ಜೀವನ ಮುಗಿಸಲು ನಿಂತವರ ಮಧ್ಯದ ವಿಕೆಟ್ ಕೆಳಗೆ ಬಿದ್ದಿದೆ” ಗೌತಮ್ ಗಂಭೀರ್ ಕಿಡಿ

ಭಾರತದ ಮಾಜಿ ಕ್ರಿಕೆಟಿಗ, ಸಂಸದ ಗೌತಮ್‌ ಗಂಭೀರ್‌ ಇತ್ತೀಚೆಗೆ ತಮ್ಮ ಖಡಕ್‌ ಟ್ವೀಟ್‌ ಗಳಿಂದಲೇ ಸುದ್ದಿಯಲ್ಲಿದ್ದಾರೆ. ಮತ್ತೆ ಟ್ವೀಟರ್‌ ನಲ್ಲಿ ಕಿಡಿ ಕಾರಿರುವ ಗೌತಿ ಈ ಬಾರಿ ಮಾಜಿ ಆಟಗಾರರಾದ ಚೇತನ್‌ ಚೌಹಾಣ್‌ ಮತ್ತು ಬಿಷನ್‌ ಸಿಂಗ್‌ ಬೇಡಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

 

ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ನವದೀಪ್ ಸೈನಿ ಅದ್ಭುತ ಬೌಲಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವಿಚಾರವನ್ನೇ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಚೇತನ್ ಮತ್ತು ಬಿಷನ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೈನಿ ಪ್ರದರ್ಶನ ಕುರಿತಂತೆ ಗಂಭೀರ್ ಟ್ವೀಟ್ ಮಾಡಿದ್ದಾರೆ. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುತ್ತಿರುವುದಕ್ಕೆ ಸೈನಿಗೆ ಅಭಿನಂದನೆಗಳು. ಸೈನಿ ನೀನು ಮಾಡಿದ ಮೊದಲ ಓವರ್ ನಲ್ಲೇ ಎರಡು ವಿಕೆಟ್ ಪಡೆದಿದ್ದೀಯಾ. ನೀನು ಅಂಗಳಕ್ಕೆ ಇಳಿಯುವ ಮುನ್ನ ನಿನ್ನ ಕ್ರಿಕೆಟ್ ಜೀವನವನ್ನು ಮುಗಿಸಲು ಯೋಚನೆ ಮಾಡಿದ್ದ ಬಿಷನ್ ಸಿಂಗ್ ಬೇಡಿ ಮತ್ತು ಚೇತನ್ ಚೌಹಾಣ್ ರ ಮಧ್ಯದ ವಿಕೆಟ್ ಈಗ ಉರುಳಿ ಬಿದ್ದಿದೆ” ಎಂದು ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಸೈನಿ ಮಿಂಚಿನ ದಾಳಿ ಸಂಘಟಿಸುವ ಮೂಲಕ ಗಮನ ಸೆಳೆದರು. ವಿಂಡೀಸ್‌ ವಿರುದ್ಧ ಅದ್ಭುತ ಬೌಲಿಂಗ್‌ ಮಾಡಿದ ನವದೀಪ್‌ ಸೈನಿ ಮೂರು ವಿಕೆಟ್‌ ಕಿತ್ತರು. ಈ ಪಂದ್ಯವನ್ನು ಭಾರತ ನಾಲ್ಕು ವಿಕೆಟ್‌ ಗಳ ಅಂತರದಿಂದ ಗೆದ್ದರೆ, ಸೈನಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಅಚ್ಚರಿಯ ಸಂಗತಿಯೆಂದರೆ ದಿಲ್ಲಿ ತಂಡಕ್ಕೆ ಸೈನಿ ಅವರ ಆಯ್ಕೆಯನ್ನು ಬಿಷನ್‌ ಸಿಂಗ್‌ ಬೇಡಿ, ಚೇತನ್‌ ಚೌಹಾಣ್‌ ಸಹಿತ ಕೆಲ ಡಿಡಿಸಿಎ ಅಧಿಕಾರಿಗಳು ಈ ಹಿಂದೆ ವಿರೋಧಿಸಿದ್ದರು.

ದಿಲ್ಲಿಯ ದಿಗ್ಗಜ ಕ್ರಿಕೆಟಿಗ ಗಂಭೀರ್‌ ಅವರೇ ಸೈನಿಗೆ ಗಾಡ್‌ ಫಾದರ್‌. ಹರಿಯಾಣದವರಾದ ಸೈನಿ ದಿಲ್ಲಿಯ ರೋಶನಾರ ಕ್ಲಬ್‌ ಮೈದಾನದಲ್ಲಿ ಟೆನಿಸ್‌ ಬಾಲ್‌ನಲ್ಲಿ ಬೌಲಿಂಗ್‌ ಮಾಡುತ್ತಿದ್ದದ್ದನ್ನು ನೋಡಿದ್ದ ಗಂಭೀರ್‌, ಅವರ ಪ್ರತಿಭೆಯನ್ನು ಗುರುತಿಸಿ ದಿಲ್ಲಿ ತಂಡಕ್ಕೆ ಆಯ್ಕೆ ಮಾಡುವಂತೆ ಡಿಡಿಸಿಎ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಸೈನಿ ‘ಹೊರರಾಜ್ಯದ ಕ್ರಿಕೆಟಿಗ’ನೆಂಬ ಕಾರಣಕ್ಕೆ ಗಂಭೀರ್‌ ಅವರ ಮನವಿಗೆ ಪುರಸ್ಕಾರ ಸಿಕ್ಕಿರಲಿಲ್ಲ. ಪಟ್ಟು ಬಿಡದ ಗಂಭೀರ್‌, 2013ರಲ್ಲಿ ಯುವ ವೇಗಿಯನ್ನು ದಿಲ್ಲಿ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಸಿಡಿಮಿಡಿಗೊಂಡಿದ್ದ ಬೇಡಿ ಮತ್ತು ಚೌಹಾಣ್‌, ಒಂದು ವೇಳೆ ಸೈನಿ ದಿಲ್ಲಿ ಪರ ರಣಜಿ ಪಂದ್ಯವಾಡಿದರೆ ಮೈದಾನದ ಹೊರಗೆ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವುದಾಗಿ ಗಂಭೀರ್‌ಗೆ ಎಚ್ಚರಿಕೆ ನೀಡಿದ್ದರು. ಆದರೆ ಇದಾವುದಕ್ಕೂ ಗಂಭೀರ್‌ ಸೊಪ್ಪು ಹಾಕಿರಲಿಲ್ಲ.

ಗಂಭೀರ್‌ ಕೃಪೆಯಿಂದ ತಂಡದಲ್ಲಿ ಸ್ಥಾನ ಪಡೆದ ಸೈನಿ, ದಿಲ್ಲಿ ಪರ ಅಮೋಘ ಪ್ರದರ್ಶನ ತೋರಿ ಈಗ ಭಾರತ ತಂಡಕ್ಕೂ ಆಯ್ಕೆಯಾಗಿ ಮ್ಯಾಚ್ ವಿನ್ನರ್ ಆಗಿ ಪರಿಣಮಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top