fbpx
ಸಮಾಚಾರ

‘ಬ್ರಿಕ್ ಲೌನ್ಗ್’ ನಲ್ಲಿ ಕನ್ನಡ ನಿರಾಕರಣೆ: ಸಿಡಿದೆದ್ದ ಸಾಮಾನ್ಯ ಕನ್ನಡಿಗ

ಮಾಲ್‍ಗಳಲ್ಲಿ, ಶಾಪ್‍ಗಳಲ್ಲಿ, ಜಿಮ್ ಸೆಂಟರ್ ನಲ್ಲಿ ಕನ್ನಡ ಹಾಡು ಹಾಕಿಲ್ಲ ಎಂದು ಕೆಲ ಕನ್ನಡಿಗರು ಜಗಳ ಮಾಡುವುದು ಕಾಮನ್. ಆದರೆ ಈಗ ಈ ಗಲಾಟೆ ಟ್ರೆಂಡು ಬೆಂಗಳೂರಿನ ಹುಳಿಮಾವು ಬಳಿಯ ‘ಬ್ರಿಕ್ ಲೌನ್ಗ್’ ಬಾರ್ ನಲ್ಲಿಯೂ ಕೇಳಿಬಂದಿದೆ.

 


 

ಈ ಬಾರ್ ನಲ್ಲಿ ಪ್ರತಿ ದಿನವೂ ಕನ್ನಡ ಬಿಟ್ಟು ಹಿಂದಿ, ತೆಲುಗು ತಮಿಳು ಹಾಡು ಪ್ಲೆ ಮಾಡಲಾಗುತ್ತಿತ್ತಂತೆ. ಈ ಕಾಟ ತಾಳಲಾರದ ಕೆಲ ಕನ್ನಡಿಗರು ಹಿಂದಿ ಹಾಡು ಹಾಕಿದ್ದಕ್ಕೆ ಸರಿಯಾಗಿ ಬೆಂಡೆತ್ತಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಹಾಡನ್ನು ಹಾಕುವಂತೆ ಒತ್ತಾಯಿಸಿದ್ದಾರೆ.

ಕನ್ನಡಿಗರು ಕನ್ನಡ ಹಾಡು ಹಾಕಿ ಎಂದು ಕೇಳಿದ್ದಕ್ಕೆ ಕನ್ನಡಿಗರನ್ನೇ ದಬಾಯಿಸಿದ ಸಿಬ್ಬಂದಿ ಬೇರೆ ಭಾಷೆಯ ಹಾಡುಗಳು ಹಾಡಲ್ಲವೇ? ಬೇರೆ ಭಾಷೆಯ ಹಾಡುಗಳನ್ನು ಹಾಕುವ ಹಾಗಿಲ್ಲವೇ ಎಂದು ಕನ್ನಡಿಗರನ್ನೇ ದಬಾಯಿಸಿದ್ದಾನೆ! ನಂತರ ಕನ್ನಡಿಗರು ಸಿಬ್ಬಂದಿಗೆ ಕನ್ನಡ ಹಾಡುಗಳನ್ನು ಪ್ಲೆ ಮಾಡುವಂತೆ ವಾರ್ನಿಂಗ್ ಕೊಟ್ಟಿದ್ದಾರೆ

ಕನ್ನಡ ಹಾಡಿಗಾಗಿ ಬಾರ್ ನ ಸಿಬ್ಬಂದಿ ಜೊತೆ ಜಗಳ ಮಾಡಿರುವ ಕನ್ನಡಿಗರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದಿ ಪ್ರಿಯನಿಗೆ ಸರಿಯಾಗಿಯೇ ಮಾಡಿದ್ದೀರಿ ಎಂದು ಬೆನ್ನು ತಟ್ಟಿದ್ದಾರೆ.

ಯಾರೊ ಒಂದಿಬ್ಬರು ಕನ್ನಡಿಗರು ಹೋಗಿ ಕನ್ನಡದ ಹಾಡು ಪ್ರಸಾರ ಮಾಡಿ, ಕನ್ನಡ ನಾಮಫಲಕ ಹಾಕಿ ಎಂದು ಎಲ್ಲಾ ಮಾಲುಗಳಿಗೂ ಹೋಗಿ ಒತ್ತಾಯಿಸುವುದು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗರು ತಾವಿರುವ ಪ್ರದೇಶದ ಮಾಲುಗಳಿಗೆ ಬೇಟಿ ನೀಡಿದಾಗ, ಕನ್ನಡಕ್ಕೆ ಒತ್ತಾಯಿಸಿದರೆ ಆಗ ಮಾಲ್ ಗಳಲ್ಲಿ ಕನ್ನಡ ನುಡಿ ಪಸರಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top