fbpx
ಸಮಾಚಾರ

ಹಿಂದೂ , ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರಾಖಿ ಸಾವಂತ್!

ಆಕ್ಟಿಂಗಿನ ಗಂಧಗಾಳಿ ಇಲ್ಲದಿದ್ದರೂ ನಟಿ ಅನ್ನಿಸಿಕೊಳ್ಳೋದು ಹೇಗೆ? ಸದಾ ಒಂದಿಲ್ಲೊಂದು ರೀತಿಯಲ್ಲಿ ಪ್ರಚಾರದಲ್ಲಿರೋದು ಹೇಗೆ ಎಂಬ ವಿಚಾರದ ಬಗ್ಗೆ ರಾಖಿ ಸಾವಂತ್ ಖಂಡಿತವಾಗಿಯೂ ಆಸಕ್ತರಿಗೆ ಸದಾ ಹೆಬ್ಬಾಗಿಲು ತೆರೆದು ಕುಂತಿರೋ ಯೂನಿವರ್ಸಿಟಿ! ಬೇರೇನೂ ಇಶ್ಯೂ ಇಲ್ಲದಿದ್ದರೆ ಯಾರ ಮೇಲಾದರೂ ಬಾಯಿಗೆ ಬಂದಂತೆ ಕೂಗಾಡಿಯಾದರೂ ಅಥವಾ ಬಟ್ಟೆ ಬಿಚ್ಚಿಯಾದರೂ ಆಗಾಗ ಸುದ್ದಿಯಾಗುತ್ತಾ ವಿವಾದವೆಬ್ಬಿಸೋದು ನಟಿ ರಾಖಿಯ ಹಳೇ ವರಸೆ. ಆದರೆ ಅದೇಕೋ ಒಂದಷ್ಟು ತಿಂಗಳುಗಳಿಂದ ಮರೆಯಾದಂತಿದ್ದ ರಾಖಿ ಇದೀಗ ಮತ್ತೊಮ್ಮೆ ಪ್ರತ್ಯಕ್ಷಳಾಗಿದ್ದಾಳೆ.

ಈಗ ಮತ್ತೇನಪ್ಪ ಎಂದು ಯೋಚಿಸುತ್ತಿದ್ದೀರಾ? ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಕೊನೆಗೂ ತನ್ನ ಮದುವೆ ಬಗ್ಗೆ ನೆಟ್ಟಿಗರಲ್ಲಿದ್ದ ಅನುಮಾನಗಳನ್ನು ಬಗೆಹರಿಸಿದ್ದಾರೆ. ಎನ್‍ಆರ್‌ಐ ಒಬ್ಬನ್ನು ವರಿಸಿದ್ದೇನೆ ಎಂದಿದ್ದಾರೆ ರಾಖಿ.

ರಾಖಿ ಸಾವಂತ್ ತನ್ನ ಇನ್‍ಸ್ಟಾಗ್ರಾಂನಲ್ಲಿ ವೆಬ್ ಸಿರೀಸ್ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಖಿ ಅವರ ಕುತ್ತಿಗೆಯಲ್ಲಿ ತಾಳಿ ಹಾಗೂ ಹಣೆಯಲ್ಲಿ ಸಿಂಧೂರ ಇಟ್ಟುಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ರಾಖಿ ಅವರನ್ನು ಪ್ರಶ್ನಿಸುತ್ತಿದ್ದಾರೆ. ಈ ಪೋಸ್ಟ್ ನೋಡಿ ಕೆಲವರು, ಅರೇ. ಏನಿದು? ನಿಮ್ಮನ್ನು ಯಾರು ಮದುವೆ ಮಾಡಿಕೊಂಡಿದ್ದಾರೆ? ಎಂದು ಆಶ್ಚರ್ಯವಾಗುವ ರೀತಿ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ಕ್ರೈಸ್ತ ಧರ್ಮದವರು ಹಣೆಯಲ್ಲಿ ಏಕೆ ಸಿಂಧೂರ ಇಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಪೋಟೋಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಖಿ ಸಾವಂತ್, ಭಯಗೊಂಡಿದ್ದೆ. ಆದರೂ ನಾನು ಮದುವೆಯಾಗಿದ್ದೇನೆ ಎಂದು ರಾಕಿ ಸಾವಂತ್ ಹೇಳಿದ್ದಾಳೆ. ತಾನೂ ವಿವಾಹವಾಗಿರುವ ಪತಿಯ ಹೆಸರು ರಿತೇಶ್. ಇಂಗ್ಲೆಂಡ್ ನಲ್ಲಿದ್ದಾರೆ. ನನ್ನ ವೀಸಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಾನು ಅವರನ್ನು ಸೇರುತ್ತೇನೆ. ಭಾರತದಲ್ಲಿ ನನ್ನ ಕೆಲಸವನ್ನು ಮುಂದುವರೆಸುತ್ತೇನೆ. ಟಿವಿ ಶೋ ನಿರ್ಮಾಣ ಮಾಡುತ್ತೇನೆ. ಬಹುದಿನಗಳ ಕನಸು ಈಗ ಪೂರ್ಣಗೊಂಡಿದೆ ಎಂದು ರಾಖಿ ಸಾವಂತ್ ಮಾಹಿತಿ ನೀಡಿದ್ದಾರೆ. ನ್ಯಾಯಾಲಯದಲ್ಲಿ ವಿವಾಹವಾದ ನಂತರ ಹಿಂದೂ , ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಹೋಟೆಲ್ ನಲ್ಲಿ ವಿವಾಹ ಸಮಾರಂಭ ನಡೆದಿದ್ದಾಗಿ ಅವರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top