fbpx
ಸಮಾಚಾರ

ಮಜಾ ಟಾಕೀಸ್ ತಂಡದ ಜೊತೆ ನಟಿ ಶ್ವೇತಾ ಚಂಗಪ್ಪ ಸೀಮಂತ ಕಾರ್ಯಕ್ರಮ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪನವರ ಸೀಮಂತ ಕಾರ್ಯಕ್ರಮವನ್ನು ಸರಳವಾರವಾಗಿ ನೆರವೇರಿಸಲಾಗಿದೆ. ಈಗ ಸೀಮಂತ ಕಾರ್ಯಕ್ರಮದ ಸಂಭ್ರಮದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

 

ಶ್ವೇತ ಅವರ ಮನೆಗೆ ಮಜಾ ಟಾಕೀಸ್ ತಂಡ ಬಂದಿದೆ. ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ದಂಪತಿ, ಸೃಜನ್ ಸಹೋದರಿ, ನಿರೂಪಕಿ ಅಪರ್ಣ ಮತ್ತು ರೆಮೊ ಸೇರಿದಂತೆ ಇಡೀ ಮಜಾ ಟಾಕೀಸ್ ಟೀಂ ಶ್ವೇತಾ ಮನೆಗೆ ಬಂದು ಶ್ವೇತಾ ಯೋಗಕ್ಷೇಮ ವಿಚಾರಿಸಿದ್ದಾರೆ.

“ಈ ಪೋಸ್ಟ್ ಗೆ ಯಾವುದೆ ಕೋಟ್ಸ್ ಅಗತ್ಯ ವಿದೆಯೇ. ಏನು ಗೊತ್ತ? ಈ ಫೋಟೋ ಹೇಳುತ್ತಿದೆ ಇವರು ನನ್ನ ಸ್ನೇಹಿತರು. ಬ್ಯುಸಿಯ ನಡುವೆಯು ಸಮಯ ಮಾಡಿಕೊಂಡು ನಮ್ಮ ಮನೆಗೆ ಬಂದಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ಹೇಳುತ್ತಿದ್ದೀನಿ” ಎಂದು ಶ್ವೇತ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ರಾಣಿ ಪಾತ್ರದಲ್ಲಿ ಬ್ಯುಸಿಯಿದ್ದ ಶ್ವೇತ ಚಂಗಪ್ಪ ಸದ್ಯ ಶೋದಿಂದ ಬ್ರೇಕ್ ಪಡೆದು ಅಮ್ಮನಾಗುತ್ತಿರುವ ಹರ್ಷದಲ್ಲಿದ್ದಾರೆ. ಇತ್ತೀಚಿಗಷ್ಟೇ ತಾವು ತಾಯಿ ಆಗುತ್ತಿರುವ ವಿಚಾರವನ್ನು ಅಭಿಮಾನಿಗಳ ಬಳಿ ಹೇಳಿಕೊಂಡಿದ್ದರು. ಈಗ ಸರಳವಾಗಿ ಸೀಮಂತ ಕಾರ್ಯವನ್ನು ಕೂಡ ಮುಗಿಸಿಕೊಂಡಿದ್ದು ಮೊದಲ ಕಂದಮ್ಮನ ಮಡಿಲು ತುಂಬಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಕೊಡಗು ಮೂಲದ ನಟಿ ಶ್ವೇತಾ ಚಂಗಪ್ಪ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ಯಾರಿಗುಂಟು ಯಾರಿಗಿಲ್ಲ ಎಂಬ ಕಾರ್ಯಕ್ರಮದ ನಿರೂಪನೆಯನ್ನು ಮಾಡಿದ್ದಾರೆ. ಕಾದಂಬರಿ, ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಸಿನಿಮಾ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಶ್ವೇತ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top