fbpx
ಸಮಾಚಾರ

“ಅಭಿಮನ್ಯು ಪಾತ್ರವಿಲ್ಲದೆ ಕುರುಕ್ಷೇತ್ರ ಕತೆಯೇ ಇಲ್ಲ, ನಿಖಿಲ್ ಪಾತ್ರವನ್ನು ನಿರ್ವಹಿಸದಿದ್ದರೇ ಕಷ್ಟವಾಗುತ್ತಿತ್ತು” ಹೀಗೆಂದು ಹೇಳಿದ್ಯಾರು ಗೊತ್ತಾ?

ಚಂದನವನದ ಬಹುನಿರೀಕ್ಷಿತ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಇದೇ ವರಮಹಾಲಕ್ಷ್ಮಿ (ಆಗಸ್ಟ್-9)ರಂದು ರಿಲೀಸ್ ಆಗಲಿದೆ. ಬಹುತಾರಗಣವನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಪ್ರತಿಯೊಂದು ಪಾತ್ರಗಳು ಚಿತ್ರದಲ್ಲಿ ತನ್ನದೇಯಾದ ಪ್ರಾಮುಖ್ಯತೆಯನ್ನು ಹೊಂದಿವೆ.

ಬೆಂಗಳೂರಿನ ರಾಕ್ ಲೈನ್ ಮಾಲ್ ನಲ್ಲಿ ಸ್ಯಾಂಡಲ್​​ವುಡ್​​ನ ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನವನ್ನ ಏರ್ಪಡಿಸಲಾಗಿತ್ತು. ಚಿತ್ರ ವೀಕ್ಷಣೆಗೆ ಕುರುಕ್ಷೇತ್ರ ಸಿನಿಮಾದ ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್, ನಟ ನಿಖಿಲ್ ಕುಮಾರಸ್ವಾಮಿ, ಸಾಧುಕೋಕಿಲಾ ಕೂಡ ಆಗಮಿಸಿದ್ದರು.

ಚಿತ್ರ ವೀಕ್ಷಣೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮುನಿರತ್ನ ರಾಜಕೀಯ ಸೇಡಿನ ಹೊರತಾಗಿಯೂ ನಿಖಿಲ್ ಅವರನ್ನ ಹೊಗಳಿದರು. ಕುರುಕ್ಷೇತ್ರದಲ್ಲಿ ಬರುವ ಅಭಿಮನ್ಯು ಪಾತ್ರ ತುಂಬಾ ಮುಖ್ಯವಾಗಿದ್ದು, ಈ ಥರದ ಪಾತ್ರಕ್ಕೆ ನಮ್ಮವರನ್ನೇ ಆಯ್ಕೆ ಮಾಡಬೇಕು. ಆಗಲೇ ಪಾತ್ರ ಚೆನ್ನಾಗಿರುತ್ತದೆ. ಹೊರಗಿನವರಿಗೆ ತಂದು ಈ ರೀತಿಯ ಪಾತ್ರ ಕೊಟ್ಟರೆ, ಅದು ನಮ್ಮವರು ಮಾಡಿದ ಹಾಗೇ ಆಗುವುದಿಲ್ಲವೆಂದು ಅಭಿಮನ್ಯು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಭಿಮನ್ಯು ಪಾತ್ರಕ್ಕೆ ಸರಿಯಾದ ನ್ಯಾಯ ಒದಗಿಸಿದ್ದಾರೆ. ಕುರುಕ್ಷೇತ್ರ ಕತೆಯಲ್ಲಿ ಅಭಿಮನ್ಯು ಪಾತ್ರವಿಲ್ಲದೇ ಕತೆನೇ ಇಲ್ಲ, ಒಂದು ವೇಳೆ ಅಭಿಮನ್ಯು ಪಾತ್ರವನ್ನ ನಿಖಿಲ್ ನಿರ್ವಹಿಸದೇ ಬೇರೆಯವರು ಮಾಡಿದ್ದಾರೆ ಇಷ್ಟೊಂದು ಚೆನ್ನಾಗಿ ಮೂಡಿಬರುತ್ತಿರಲಿಲ್ಲ” ಎಂದು ಮುನಿರತ್ನ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top