fbpx
ಸಮಾಚಾರ

ಸಿನಿಮಾದಲ್ಲಿ ವ್ಯಕ್ತಿಯ ಫೋನ್ ನಂಬರ್ ದುರ್ಬಳಕೆ; ಪಜೀತಿಗೀಡಾದ ಯುವಕ!

ನಟಿ ಸನ್ನಿ ಲಿಯೋನ್​ ಅವರಿಗಿರುವ ಅಭಿಮಾನಿ ಬಳಗದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ನೀಲಿ ಚಿತ್ರಗಳಿಗೆ ವಿದಾಯ ಹೇಳಿ ಸದ್ಯ ಬಾಲಿವುಡ್​ನಲ್ಲೇ ಬ್ಯುಸಿಯಾಗಿರು ಸನ್ನಿ ಈಗ ವಿವಾದವೊಂದಕ್ಕೆ ಸಿಕ್ಕಿಕೊಂಡಿದ್ದಾರೆ. ಸನ್ನಿ ಲಿಯೋನ್​ ದೆಹಲಿಯ ವ್ಯಕ್ತಿಯೊಬ್ಬರ ಕ್ಷಮೆ ಯಾಚಿಸಿದ್ದಾರೆ.

ಬಾಲಿವುಡ್ ತಾರೆಗಳಾದ ದಿಲ್ಜಿತ್ ದೋಸಾಂಜ್, ವರುಣ್ ಶರ್ಮಾ, ಕೃತಿ ಸನನ್ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ ‘ಅರ್ಜುನ್ ಪಟಿಯಾಲಾ’ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಅತಿಥಿ ಪಾತ್ರ ಪೋಷಿಸಿದ್ದು ಸ್ಪೆಷಲ್ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ್ದಾರೆ.

ಇದೇ ಜುಲೈ 26ರಂದು ತೆರೆಕಂಡ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಸನ್ನಿವೇಶವೊಂದಾಲ್ಲಿ ಸನ್ನಿ ಲಿಯೋನ್ ತನ್ನ ಫೋನ್ ನಂಬರ್‌ರನ್ನು ದಿಲ್ಜಿತ್‌ಗೆ ನೀಡುತ್ತಾರೆ. ಆದರೆ ಆ ಫೋನ್ ನಂಬರ್ ದಿಲ್ಲಿ ಮೂಲದ 27 ವರ್ಷದ ಯುವಕ ಪುನೀತ್ ಅಗರ್ವಾಲ್‍ಗೆ ಸೇರಿದ್ದು ಇದೀಗ ಆ ಸಂಖ್ಯೆಗೆ ಸಿಕ್ಕಾಪಟ್ಟೆ ಫೋನ್ ಕರೆಗಳು ಬರುತ್ತಿವೆಯಂತೆ.

ನಾನು ಬಾಲಿವುಡ್ ನಟಿ ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕರೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು ಕಿಡಿಗೇಡಿಗಳು ಮೇಲಿಂದ ಮೇಲೆ ಕರೆ ಮಾಡಿ ಯುವಕನಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಈ ರೀತಿಯ ಕರೆಗಳಿಂದ ಬೇಸತ್ತ ಪುನೀತ್ ಜುಲೈ 30ರಂದು ಸ್ಥಳೀಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ತಜ್ಞರೊಂದಿಗೆ ಚರ್ಚಿಸಿ ತನಿಖೆ ಆರಂಭಿಸಿದ್ದರು. ಸನ್ನಿ ಲಿಯೋನ್ ಸಿನಿಮಾದಲ್ಲಿ ನನ್ನ ನಂಬರ್ ಹೇಳಿದ್ದರಿಂದ ಹಲವರು ವಿದೇಶಗಳಿಂದಲೂ ಕರೆ ಮಾಡಿ ಮಾತನಾಡುತ್ತಿದ್ದಾರೆ. ನಾನು ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಲು ಪ್ರಯತ್ನಿಸಿದ್ರೆ ಅವಾಚ್ಯ ಪದಗಳಿಂದ ನಿಂದಿಸಲು ಆರಂಭಿಸುತ್ತಾರೆ ಎಂದು ಪುನೀತ್ ದೂರಿನಲ್ಲಿ ಉಲ್ಲೇಖಿಸಿದ್ದರು.

ಇದನ್ನು ತಿಳಿದ ಸನ್ನಿ ಲಿಯೋನ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ಆ ವ್ಯಕ್ತಿಗೆ ಬಹಿರಂಗವಾಗಿ ಸಾರಿ ಕೇಳಿದ್ದಾರೆ. ಮತ್ತೊಮ್ಮೆ ಇಂತಹ ತಪ್ಪುಗಳು ತಮ್ಮ ಸಿನಿಮಾಗಳಲ್ಲಿ ನಡೆಯದಂತೆ ಮುನ್ನಚ್ಚರಿಕೆ ವಹಿಸುತ್ತೇನೆ ಅಂದಿದ್ದಾರೆ.

ಅಂದಹಾಗೆ ಈ ತರಹದ ಕೇಸ್​​​​​​​ಗಳು ಇದೇ ಮೊದಲೇನಲ್ಲ, ಹಿಂದೆ ಗಜಿನಿ ಸಿನಿಮಾದಲ್ಲಿಯೂ ಅಮಿರ್​ಖಾನ್​ ಬೆಂಗಳೂರಿನ ಉದ್ಯಮಿಯ ನಂಬರ್ ಬಳಸಿದ್ದರು. ಅದು ಕೂಡ ವಿವಾದಕ್ಕೆ ಗುರಿಯಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top