fbpx
ಸಮಾಚಾರ

ಸುದೀಪ್ ‘ಪೈಲ್ವಾನ್’ ಆಡಿಯೋ ಲಾಂಚ್ ಮಾಡಲಿದ್ದಾರೆ ಪುನೀತ್ ರಾಜಕುಮಾರ್- ಚಿತ್ರದುರ್ಗದಲ್ಲಿ ಸ್ಟಾರ್ ಗಳ ಸಮಾಗಮ

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಬಿಡುಗಡೆ ದಿನಾಂಕ ಸೆಪ್ಟೆಂಬರ್ 12ಕ್ಕೆ ಫಿಕ್ಸ್ ಆಗಿದೆ.

 

 

ಆಗಸ್ಟ್ 9ಕ್ಕೆ ಆಡಿಯೋ ರಿಲೀಸ್
ಚಿತ್ರ ಬಿಡುಗಡೆ ಮಾಡುವುದಕ್ಕೂ ಮುನ್ನ ಅದ್ದೂರಿಯಾಗಿ ಆಡಿಯೋ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ ಆಗಸ್ಟ್ 9 ರಂದು ಚಿತ್ರದುರ್ಗದಲ್ಲಿ ಹಾಡುಗಳು ಬಿಡುಗಡೆ ಆಗಲಿದೆ.

ಆಡಿಯೋ ಲಾಂಚ್ ಮಾಡ್ತಾರೆ ಪುನೀತ್ ರಾಜಕುಮಾರ್:
ಇನ್ನು ಚಿತ್ರದ ಹಾಡುಗಳನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಿಲೀಸ್ ಮಾಡಲಿದ್ದಾರಂತೆ. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಭಾಗವಹಿಸಲಿರುವ ಪುನೀತ್ ಆಡಿಯೋ ಲಾಂಚ್ ಕೂಡ ಮಾಡಲಿದ್ದಾರೆ ಎಂದು ಚಿತ್ರತಂಡದ ಆಪ್ತವಲಯದಿಂದ ತಿಳಿದು ಬಂದಿದೆ.

ಆಡಿಯೋ ಲಾಂಚ್ ಎಲ್ಲಿ:
ಪೈಲ್ವಾನ್ ಹಾಡುಗಳ ಹಬ್ಬ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಗೇಂದ್ರ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಸೆಪ್ಟೆಂಬರ್ 12ಕ್ಕೆ ತೆರೆಗೆ:
ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದ್ದು ಸೆಪ್ಟೆಂಬರ್ 12ರಂದು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ಇನ್ನು ಐದೂ ಭಾಷೆಯಲ್ಲಿಯೂ ಅಂದೇ ಚಿತ್ರ ತೆರೆಕಾಣಲಿದೆ. ಪಂಚಭಾಷೆಯಲ್ಲಿ ನಿರ್ಮಾಣವಾಗಿರುವ ಪೈಲ್ವಾನ್ ವಿತರಣಾ ಹಕ್ಕನ್ನು ಜೀ ಸ್ಟುಡಿಯೋಸ್ ಪಡೆದುಕೊಂಡಿದ್ದು, ದೇಶದಾದ್ಯಂತ ಚಿತ್ರವನ್ನು ಏಕಕಾಲದಲ್ಲಿ 2500ಕ್ಕಿಂತ ಹೆಚ್ಚಿನ ಚಿತ್ರಮಂದಿರದಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top