fbpx
ಸಮಾಚಾರ

ರಜಿನಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಸಂಯುಕ್ತ ಹೆಗ್ಡೆ: ಕಾರಣವೇನು ಗೊತ್ತಾ?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ಮಾಡಿದ ಒಂದೇ ಚಿತ್ರಕ್ಕೆ ಇರೋ ಬರೋ ವಿವಾದಗಳನ್ನೆಲ್ಲಾ ಮೈಮೇಲೆ ಎಳೆದುಕೊಂಡು ಹೆಚ್ಚು ಸುದ್ದಿಯಾಗುತ್ತಿದ್ದ ನಟಿ ಸಂಯುಕ್ತ ಹೆಗ್ಡೆ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಖರಾ ಮಾಡಿಕೊಂಡು ಹೊರ ಬಿದ್ದ ಬಳಿಕ ವಾರಕ್ಕೊಂದರಂತೆ ವಿಚಿತ್ರ ಭಂಗಿಯ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅಪ್ಲೋಡ್ ಮಾಡಿ ವಿಕೃತಾನಂದ ಪಡುತ್ತಿದ್ದ ಸಂಯುಕ್ತ ಸ್ವಲ್ಪ ದಿನಗಳ ಕಾಲ ಎಲ್ಲವನ್ನು ಮರೆತು ಸುಮ್ಮನಾಗಿಬಿಟ್ಟಿದ್ದರು ಆದ್ರೆ ಇದೀಗ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದಾರೆ.

ಸಂಯುಕ್ತ ಹೆಗ್ಡೆ ತಮಿಳಿನಲ್ಲಿ ನಟಿಸಿರುವ ‘ಕೋಮಾಲಿ’ ಎಂಬ ಸಿನಿಮಾ ಕೂಡ ಈಗ ವಿವಾದಕ್ಕೆ ಗುರಿಯಾಗಿದೆ. ಹೌದು ಕಾಲಿವುಡ್ ನಲ್ಲಿ ‘ಕೋಮಾಲಿ’ ಸಿನಿಮಾ ರಜನಿಕಾಂತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಿನಿಮಾದ ಒಂದು ದೃಶ್ಯದ ವಿರುದ್ಧ ರಜನಿಕಾಂತ್ ಅಭಿಮಾನಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಆ ದೃಶ್ಯವನ್ನು ತೆಗೆಯಲು ಚಿತ್ರತಂಡ ಒಪ್ಪಿಕೊಂಡಿದೆ.

ರಜಿನಿ ಫ್ಯಾನ್ಸ್ ಗಳಿಗೆ ಏಕೆ ಕೋಪ?
ಕೋಮಾಲಿ’ ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಟ್ರೇಲರ್ ನಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಮಾಡಿರುವ ವಿಡಿಯೋವನ್ನು ಬಳಕೆ ಮಾಡಿದ್ದು ರಜನಿಕಾಂತ್ ಅವರನ್ನು ವ್ಯಂಗ್ಯ ಮಾಡಲಾಗಿದೆ ಎಂದು ಚಿತ್ರತಂಡ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ರಜಿನಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top