fbpx
ಸಮಾಚಾರ

ಕಾಶ್ಮೀರ ವಿಚಾರಕ್ಕೆ ಮೂಗು ತೂರಿಸಿದ ಶಾಹಿದ್‌ ಅಫ್ರಿದಿಗೆ ಗೌತಮ್‌ ಗಂಭೀರ್‌ ತಿರುಗೇಟು!

ಪಾಕಿಸ್ತಾನ ಮಾಜಿ ಬೌಲರ್​ ಶಾಹಿದ್​ ಅಫ್ರಿದಿ ಹಾಗೂ ಮಾಜಿ ಕ್ರಿಕೆಟರ್​, ಸಂಸದ ಗೌತಮ್​ ಗಂಭೀರ್​ ನಡುವೆ ಈಗ ಕಾಶ್ಮೀರ ವಿಚಾರಕ್ಕೆ ಸಂಬಂಧಪಟ್ಟಂತೆ ಜಟಾಪಟಿ ನಡೆದಿದೆ. ಮೊದಲಿನಿಂದಲೂ ನಿಂದನೆ   ಪ್ರತಿನಿಂದನೆಯಲ್ಲಿ ತೊಡಗಿರುವ ಇವರಿಬ್ಬರು ಮತ್ತೊಮ್ಮೆ ಮಾತಿನ ಚಾಟಿ ಬೀಸಿಕೊಂಡಿದ್ದಾರೆ.

 

 

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಭಾರತದ ನಿಲುವನ್ನು ಪರೋಕ್ಷವಾಗಿ ಟೀಕಿಸಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಆಫ್ರಿದಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಭಾರತದ ಮಾಜಿ ಕ್ರಿಕೆಟಿಗ, ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವಿಟರ್ ಮೂಲಕವೇ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಶಾಹಿದ್ ಅಫ್ರಿದಿ ಮತ್ತೆ ಕಾಶ್ಮೀರ ಖ್ಯಾತೆ ತೆಗೆದಿದ್ದಾರೆ. ನಮ್ಮೆಲ್ಲರಿಗೆ ಸ್ವಾತಂತ್ರ್ಯವಿರುವಂತೆ, ಕಾಶ್ಮೀರಿಗರಿಗೆ ವಿಶ್ವಸಂಸ್ಥೆ ನಿರ್ಣಣಯದ ಪ್ರಕಾರ ಅವರ ಹಕ್ಕುಗಳನ್ನು ನೀಡಬೇಕು. ಇತಂಹ ಸಮಸ್ಯೆಗಳನ್ನು ಪರಿಹರಿಸಲು ಇರುವ ವಿಶ್ವಸಂಸ್ಥೆ ಯಾಕೆ ನಿದ್ದೆಮಾಡುತ್ತಿದೆ. ಅಪ್ರಚೋದಿತ ದಾಳಿ, ಹತ್ಯೆ, ಅಪರಾಧಗಳು ಕಾಶ್ಮೀರದಲ್ಲಿ ತಾಂಡವವಾಡುತ್ತಿದೆ. ಮಾನವೀಯತೆಯ ವಿರುದ್ದ ನಡೆಯುತ್ತಿರುವ ದಾಳಿ ಇದು. ತಕ್ಷಣವೇ ಅಮೆರಿಕಾ ಮಧ್ಯಪ್ರವೇಶಿಸಬೇಕು ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.

 

 

ಇದಕ್ಕೇ ಸಂಸದ ಗೌತಮ್‌ ಗಂಭೀರ್‌ ತಿರುಗೇಟು ನೀಡಿ, ” ಕಣಿವೆ ರಾಜ್ಯದಲ್ಲಿ ಅಪ್ರಚೋದಿತ ಆಕ್ರಮಣ ನಡೆಯುತ್ತಿದ್ದು, ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿವೆ. ಈ ವಿಷಯಗಳ ಪರಿಹರಿಸುವ ನಿಟ್ಟಿನಲ್ಲಿ ಅಫ್ರಿದಿ ಧನಿ ಎತ್ತಲಿ ಎಂದು ಹೇಳಿದ್ದಾರೆ. “ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ” ಇವೆಲ್ಲವೂ ನಡೆಯುತ್ತಿದೆ ಎಂದು ಹೇಳುವುದನ್ನು ಮರೆತಿದ್ದೇನೆ. ಚಿಂತಿಸಬೇಡಿ, ಇದನ್ನು ಬಗೆಹರಿಸುತ್ತೇವೆ ಮಗನೇ!!! ” ಎಂದು ಖಾರವಾಗಿ ಅಫ್ರಿದಿಗೆ ಗಂಭಿರ್‌ ತಿರುಗೇಟು ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top