fbpx
ಸಮಾಚಾರ

ಯಶ್ ಅವರನ್ನೇ ಮದುವೆ ಆಗಿದ್ದು ಯಾಕೆ?ಸ್ನೇಹಿತರ ದಿನದಂದು ಕಾರಣ ಬಿಚ್ಚಿಟ್ಟ ರಾಧಿಕಾ ಪಂಡಿತ್!

ತೆರೆ ಮೇಲಿರಲಿ ಅಥವಾ ತೆರೆ ಹಿಂದಿರಲಿ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ ಮೀಸಲಿದೆ.. ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ನೆನ್ನೆ ‘ಫ್ರಂಡ್‌ಶಿಪ್ ಡೇ’ ಅಂಗವಾಗಿ ಹೊಸ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. ರಾಧಿಕಾ ಪಂಡಿತ್ ರಾಕಿಂಗ್ ಸ್ಟಾರ್ ಯಶ್ ರನ್ನೆ ಮದುವೆಯಾಗಲು ಒಂದೇ ಒಂದು ಕಾರಣವಿತ್ತಂತೆ ಅದು ಯಾವುದು ಎಂಬುದನ್ನು ಇದೀಗ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಸ್ನೇಹಿತರ ದಿನಾಚರಣೆ ಅಂಗವಾಗಿ ನಟಿ ರಾಧಿಕಾ ಪಂಡಿತ್ ಯಶ್ ಹಾಗು ತಮ್ಮ ಫೋಟೋವನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಜತೆಗೆ, ಅದಕ್ಕೊಂದು ಕ್ಯಾಪ್ಶನ್ ಕೊಟ್ಟಿದ್ದಾರೆ. “ಅವರು ಹೇಳಿದರು… ಜೀವನವು ನಿನ್ನ ಬೆಸ್ಟ್ ಫ್ರಂಡ್ ಜತೆಗಿದ್ದರೆ ಚೆನ್ನಾಗಿರುತ್ತದೆ ಎಂದು, ಅದಕ್ಕೇ ನಾನು ನನ್ನ ಬೆಸ್ಟ್ ಫ್ರಂಡ್‌ಅನ್ನು ಮದುವೆ ಮಾಡಿಕೊಂಡೆ..” ಎಮದು ಪೋಸ್ಟ್ ಮಾಡಿದ್ದಾರೆ.

 

 


 

ಒಟ್ಟಿನಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದ ಬಣ್ಣದ ಜಗತ್ತಿನಲ್ಲಿಕೊಂಡೆ ವರ್ಷಾಂತರಗಳ ಕಾಲ ಪ್ರೀತಿಯನ್ನ ಕಾಪಿಟ್ಟುಕೊಂಡು ಮದುವೆಯಾಗಿ ಈಗ ಮಗುವನ್ನು ಪಡೆದ ಈ ಜೋಡಿ ನೂರ್ಕಾಲ ಸುಖವಾಗಿ ಬಾಳಲಿ, ಬದುಕು ಬಂಗಾರವಾಗಿರಲಿ ಅಂತ ಮನಃಪೂರ್ವಕವಾಗಿ ಹಾರೈಸೋಣ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top