fbpx
ಸಮಾಚಾರ

ವಾಜಪೇಯಿ ಮಾಡದ ಕೆಲಸವನ್ನು ಮೋದಿ ಮಾಡಿದ್ದಾರೆ- ಪ್ರಧಾನಿಯನ್ನು ಕೊಂಡಾಡಿದ ಕೆ.ಎಸ್.ಭಗವಾನ್

ಸಾಮಾಜಿಕ ವಿದ್ಯಮಾನಗಳ ಬಗ್ಗೆ ತಮ್ಮ ನಿಲುವನ್ನು ನಿರ್ಬಿಢೆಯಿಂದ ಮಂಡಿಸುತ್ತಲೇ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವವರು ಪ್ರಗತಿಪರ ಚಿಂತಕ, ಹಿರಿಯ ಸಾಹಿತಿ ಪ್ರೊ. ಕೆ.ಎಸ್ ಭಗವಾನ್​.. ತಮ್ಮ ಬರಹಗಳಿಗಿಂತಲೂ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ಕೆಎಸ್ ಭಗವಾನ್ ಅವರು ಇದೀಗ ಅಚ್ಚರಿಯ ಬೆಳವಣಿಗೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.

 

 

ಪ್ರೊ|| ಕೆಎಸ್ ಭಗವಾನ್ ಆರ್ಟಿಕಲ್ 370 ರದ್ದತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮೋದಿ ದಿಟ್ಟ ನಿರ್ಧಾರವನ್ನು ಹಾಡಿ ಹೊಗಳಿದ್ದಾರೆ. ಆರ್ಟಿಕಲ್ 370 ರದ್ದತಿಯಿಂದಾಗಿ ಕಾಶ್ಮೀರಕ್ಕೆ ಸುರಿಯಲಾಗುತ್ತಿದ್ದ ಕೋಟ್ಯಾಂತರ ರೂಪಾಯಿ ಹಣವನ್ನು ಇನ್ನು ಮುಂದೆ ಜನತೆಯ ಕಲ್ಯಾಣಕ್ಕಾಗಿ, ಅಭಿವೃದ್ಧಿಗಾಗಿ ಬಳಸುವುದಕ್ಕೆ ಅನುಕೂಲವಾಗಲಿದೆ. ಮೋದಿ 70 ವರ್ಷಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯನ್ನು ಸಂತಸಪಡಿಸಿದ್ದಾರೆ ಎಂದು ಭಗವಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋದಿ ಹೆಸರು ಇನ್ಮುಂದೆ ಇತಿಹಾಸದಲ್ಲಿ ಅಜರಾಮರವಾಗಲಿದೆ. ಮೋದಿ ಹೆಸರು ಹೇಳಲು ನನಗೆ ಸಂತೋಷ ಮತ್ತು ಹೆಮ್ಮೆಯಾಗುತ್ತಿದ್ದು, ಜೈ ನರೇಂದ್ರ‌ ಮೋದಿ ಎಂದು ಬಣ್ಣಿಸಿದ್ದಾರೆ.

ಅಂದಹಾಗೆ ಸದಾ ಬಿಜೆಪಿ, RSS ಸಂಘಪರಿವಾರದ‌ ವಿರುದ್ಧ ಕೋಮುವಾದಿಗಳು ಎಂದು ಉರಿದುಬೀಳುತ್ತಿದ್ದ ಭಗವಾನ್, ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವುದು ಅಚ್ಚರಿಗೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top