fbpx
ಸಮಾಚಾರ

“ಈ ದಿನಕ್ಕಾಗಿ ಜೀವಮಾನವಿಡೀ ಕಾದಿದ್ದೆ” ಕೊನೆಯ ಟ್ವೀಟ್ ನಲ್ಲಿ ಸುಷ್ಮಾ ಸ್ವರಾಜ್ ಹೇಳಿದ್ದೇನು?

ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಕಳೆದ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಹಠಾತ್ ನಿಧನ ಹೊಂದಿದ್ದಾರೆ. ಅವರು ನಿಧನಕ್ಕೂ ಮುನ್ನ ನಿನ್ನೆ ಸಾಯಂಕಾಲ 7.23ಕ್ಕೆ ಒಂದು ಟ್ವೀಟ್ ಮಾಡಿದ್ದಾರೆ. ಅದೀಗ ಭಾರೀ ವೈರಲ್ ಆಗಿದೆ. ಆ ಟ್ವೀಟ್ ಅನೇಕರಿಗೆ ಖುಷಿ ಕೊಟ್ಟಿದ್ದು ಮಾತ್ರವಲ್ಲದೆ ಕಣ್ಣಲ್ಲಿ ನೀರು ತರಿಸಿದ್ದು ಸುಳ್ಳಲ್ಲ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರ ನಿರ್ಧಾರ ಇಡಿ ದೇಶಕ್ಕೆ ಸಂಭ್ರಮ ತಂದಿತ್ತು. ಆರ್ಟಿಕಲ್ 370 ರದ್ದು ಕುರಿತು ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದರು. ಇದು ಸಷ್ಮಾ ಸ್ವರಾಜ್ ಅವರ ಕೊನೆಯ ಟ್ವೀಟ್ ಆಗಿತ್ತು.

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನನ್ನ ಜೀವಮಾನದಲ್ಲಿ ಈ ದಿನವನ್ನು ನೋಡಲು ನಾನು ಬಹುದಿನಗಳಿಂದಲೂ ಕಾಯುತ್ತಿದೆ,’ ಎಂದು ಬರೆದುಕೊಂಡಿದ್ದರು. ಆದರೆ, ಈ ಟ್ವೀಟ್‌ ಮಾಡಿದ ಕೆಲವೇ ಗಂಟೆಗಳಲ್ಲೇ ಅವರು ವಿಧಿವಶರಾಗಿದ್ದಾರೆ.

ದೇಶಕ್ಕೆ ಸಂಬಂಧಪಟ್ಟ ವಿಚಾರವಿರಲಿ, ರಾಜಕೀಯ ವಿಚಾರವಿರಲಿ ಅವರು ಭಾರತೀಯ ಜನತಾ ಪಕ್ಷದಲ್ಲಿ ಅಗ್ರಪಂಕ್ತಿಯ ನಾಯಕರ ಜೊತೆಯಲ್ಲಿಯೇ ತಮ್ಮ ಜೀವಿತಾವಧಿಯಲ್ಲಿ ಹೋರಾಡಿದವರು. ಜಮ್ಮು-ಕಾಶ್ಮೀರ ಸಮಸ್ಯೆ ವಿಚಾರದಲ್ಲಿ ಕೂಡ ಅವರು ಹೋರಾಟ ಮಾಡಿಕೊಂಡು ಬಂದಿದ್ದರು. 2014ರಿಂದ 2019ರ ಏಪ್ರಿಲ್ ವರೆಗೆ ವಿದೇಶಾಂಗ ಸಚಿವೆಯಾಗಿದ್ದಾಗ ಸುಷ್ಮಾ ಸ್ವರಾಜ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದರು. ಒಂದು ಟ್ವೀಟ್ ಮೂಲಕವೇ ಹಲವರ ಸಮಸ್ಯೆಗೆ ಸ್ಪಂದಿಸಿದ್ದು ಉಂಟು, ಹಲವರನ್ನು ಕಷ್ಟದಿಂದ ಪಾರು ಮಾಡಿದ್ದೂ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top