fbpx
ಸಮಾಚಾರ

ಮಾಜಿ ಸ್ಪೀಕರ್ ರಮೇಶ್ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮಾಜಿ ಸ್ಪೀಕರ್ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. 2018ರಲ್ಲಿ ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಔಷಧಗಳ ಹಂಚಿಕೆ ಹಾಗೂ ಖರೀದಿಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು ವಕೀಲ ಶಿವಾರೆಡ್ಡಿ ಎಂಬುವವರು, ದೂರು ನೀಡಿದ್ದಾರೆ.

ಗುಣಮಟ್ಟ ಕಾಯ್ದುಕೊಳ್ಳದ ಔಷಧಗಳನ್ನು ಪರೀಕ್ಷೆ ನಡೆಸದೆಯೇ ಖರೀದಿಸಿ ಸರಕಾರ ಆಸ್ಪತ್ರೆಗಳಿಗೆ ಪೂರೈಸಿರುವ ‘ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್‌ ಆ್ಯಂಡ್‌ ವೇರ್‌ ಔಸಿಂಗ್‌ ಸೊಸೈಟಿ’ ಲೋಪ ಎಸಗಿರುವುದನ್ನು ಭಾರತೀಯ ಲೆಕ್ಕ ಪರಿಶೋಧಕರ ವರದಿ(ಸಿಎಜಿ) ಯಿಂದ ಬಹಿರಂಗವಾಗಿದೆ. 2017ರ ಮಾರ್ಚ್‌ಗೆ ಕೊನೆಗೊಂಡಂತೆ ಸಿಎಜಿಯ 2ನೇ ವರದಿಯಲ್ಲಿ ಲೋಪ ಪತ್ತೆ ಹಚ್ಚಲಾಗಿದೆ. ಈ ವರದಿ ಆಧರಿಸಿ ವಕೀಲರೊಬ್ಬರು ಹಿಂದಿನ ಆರೋಗ್ಯ ಸಚಿವರಾದ ರಮೇಶ್‌ ಕುಮಾರ್‌ ಹಾಗೂ ಯು.ಟಿ.ಖಾದರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ದೂರಿನ ಕುರಿತು ಪರಿಶೀಲನೆ ನಡೆದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಗುಣಮಟ್ಟ ಪರೀಕ್ಷೆಯಲ್ಲಿ 16 ಕಂಪನಿಗಳ ಔಷಧದಲ್ಲಿ ಗುಣಮಟ್ಟದ ಕೊರತೆ ಕಂಡು ಬಂದಿದೆ. ಗುಣ ಮಟ್ಟದ ಕೊರತೆ ಇರುವ ಔಷಧ ಗಳನ್ನೇ ಆಸ್ಪತ್ರೆಗೆ ಪೂರೈಕೆ ಮಾಡಲಾಗಿದೆ. ಗುಣಮಟ್ಟವಿಲ್ಲದ ಔಷಧ ಗಳನ್ನೇ ರೋಗಿಗಳಿಗೆ ನೀಡಲಾಗಿದೆ. ಇದರಲ್ಲಿ ಕೇವಲ 2 ಕಂಪನಿಗಳು ಮಾತ್ರ ಬ್ಲ್ಯಾಕ್ ಲಿಸ್ಟ್ ಗೆ ಸೇರ್ಪಡೆ ಮಾಡಲಾಗಿದೆ. ಉಳಿದ 14 ಕಂಪನಿಗಳ ಕಳಪೆ ಔಷಧ ಗಳನ್ನು ಇನ್ನೂ ರೋಗಿಗಳಿಗೆ ಪೂರೈಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top