fbpx
ಸಮಾಚಾರ

ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಈಗಾಗಲೇ ಮಹಾಮಳೆಗೆ ರಾಜ್ಯದ ಅನೇಕ ಭಾಗಗಳು ಜಲಾವೃತವಾಗಿವೆ. ಮಹಮಳೆ ಇನ್ನೂ ಮುಂದುವರೆಯುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆಯನ್ನೂ ನೀಡಿದೆ. ಇನ್ನು ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಈ ನಡುವೆ ಚಾಲೆಜಿಂಗ್ ಸ್ಟಾರ್ ದರ್ಶನ ಅವರು ಉತ್ತರ ಕರ್ನಾಟಕದ ಜನರ ನೆರವಿಗೆ ನಿಂತಿದ್ದಾರೆ.

 

 

ಈ ಕುರಿತು ಟ್ವೀಟ್‌ ಮಾಡಿರುವ ನಟ ದರ್ಶನ, ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿರುತ್ತದೆ. ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಇವರಿಗೆ ಮಾಡಬೇಕಾಗಿ ವಿನಂತಿಸುತ್ತೇನೆ ಎಂದು ಟ್ವೀಟ್​​​ ಮಾಡಿ ಮನವಿಯನ್ನು ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹದ ರಭಸಕ್ಕೆ ತುತ್ತಾಗಿರುವ ಹಲವು ಹಳ್ಳಿಗಳ ಜನರಿಗೆ ಮೂಲಭೂತ ಸಾಮಗ್ರಿಗಳ ಅವಶ್ಯಕತೆ ಇದೆ. ನಮ್ಮ ಡಿ ಕಂಪನಿ ಬಳಗದಿಂದಲೂ ಸಹ ನಮ್ಮ ಕೈಲಾದ ಅಳಿಲು ಸೇವೆಯನ್ನು ಮುಂದುವರಿಸೋಣ. ತಮ್ಮ ಕೈಲಾದ ಸಹಾಯದೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸಲು ಕೆಳಗಿನ ದೂರವಾಣಿ ನಂಬರ್ ಗಳಿಗೆ ಸಂಪರ್ಕಿಸತಕ್ಕದ್ದು ಎಂದು ಚಾಲೆಂಜಿಂಗ್ ಸ್ಟಾರ್ ಫೇಸ್‍ಬುಕ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೇಸ್ ಬುಕ್ ಬರಹದ ಪೂರ್ಣ ಪಠ್ಯ ಹೀಗಿದೆ:
ಉತ್ತರ ಕರ್ನಾಟಕದಲ್ಲಿ ಪ್ರವಾಹದ ರಭಸಕ್ಕೆ ತುತ್ತಾಗಿರುವ ಹಲವು ಹಳ್ಳಿಗಳ ಜನರಿಗೆ ಮೂಲಭೂತ ಸಾಮಗ್ರಿಗಳ ಅವಶ್ಯಕತೆ ಇದೆ. ನಮ್ಮ ಡಿ ಕಂಪನಿ ಬಳಗದಿಂದಲೂ ಸಹ ನಮ್ಮ ಕೈಲಾದ ಅಳಿಲುಸೇವೆಯನ್ನು ಮುಂದುವರೆಸೋಣ. ತಮ್ಮ ಕೈಲಾದ ಸಹಾಯದೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸಲು ಕೆಳಗಿನ ದೂರವಾಣಿ ನಂ. ಗಳಿಗೆ ಸಂಪರ್ಕಿಸತಕ್ಕದ್ದು.

ಅಗತ್ಯ ವಸ್ತುಗಳು,
ಬಟ್ಟೆಗಳು
ಬೇಳೆ, ಅಕ್ಕಿ, ದವಸ ಧಾನ್ಯಗಳು
ಬಿಸ್ಕತ್ ಮತ್ತು ಸಂರಕ್ಷಿತ ಆಹಾರ ಪದಾರ್ಥಗಳು
ಚಪ್ಪಲಿಗಳು
ರೈನ್ ಕೋರ್ಟ್ ಗಳು
ವಾಟರ್ ಬಾಟಲ್ ಗಳು
ಜನರಲ್ ಮೆಡಿಸನ್ಸ್
ಅಡುಗೆ ಎಣ್ಣೆ
ಟೂತ್ ಬ್ರಷ್, ಟೂತ್ ಪೇಸ್ಟ್, ಸಾಬೂನು
ಟೆಟ್ರಾ ಪ್ಯಾಕ್ ಹಾಲು

ರಾಹುಲ್ 9986103219
ಶರತ್ 9036197999
ಚೇತನ್ 9620629646

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top