fbpx
ಸಮಾಚಾರ

ಪ್ರವಾಹ ಪೀಡಿತ ಉತ್ತರ ಕರ್ನಾಟಕ ಜನರ ನೆರವಿಗೆ ನಿಂತ ಬಾಲಿವುಡ್ ನಟ

ರಾಜ್ಯಾದ್ಯಂತ ಮಳೆರಾಯನ ಅಬ್ಬರಕ್ಕೆ ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದ ಬಹುತೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿ ಜಲಾವೃತಗೊಂಡಿದೆ. ಜನರು ಮನೆ, ಮಠ ಕಳೆದುಕೊಂಡು ಕಂಗಲಾಗಿ ಹೋಗಿದ್ದಾರೆ. ಸದ್ಯ ಅವರಿಗೆ ನೆರವಿನ ಸಹಾಯ ಹಸ್ತ ಬೇಕಾಗಿದ್ದು, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಸಹಾಯ ಒದಗಿಸುತ್ತಿದೆ. ಜೊತೆಗೆ ಸ್ಯಾಂಡಲ್​ವುಡ್​ ನಟರು, ಕಲಾವಿದರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ನೆರವಿಗೆ ಧಾವಿಸುತ್ತಿದ್ದಾರೆ.

 

 

ಸ್ಯಾಂಡಲ್ ವುಡ್ ನಟರ ಜೊತೆಗೆ ಟಾಲಿವುಡ್ ವಿಲನ್ ಕಬೀರ್ ದುಹಾನ್ ಸಿಂಗ್ ಕೂಡ ಉತ್ತರ ಕರ್ನಾಟಕ ಜನರ ನೆರವಿಗೆ ನಿಂತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಬೀರ್ “ಪ್ರವಾರದಿಂದ ಸಂಕಷ್ಟದಲ್ಲಿ ಸಿಲುಕಿರುವ ಉತ್ತರ ಕರ್ನಾಟಕ ಜನರಿಗೆ ದಯವಿಟ್ಟು ಸಹಾಯ ಮಾಡಿ. ಯಾವುದೆ ಬೆಂಬಲದೊಂದಿದೆ ನೀವು ಸಹಾಯ ಮಾಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಜೊತೆಗೆ ಹಲವು ಸ್ಯಾಂಡಲ್‍ವುಡ್ ಕಲಾವಿದರು ಕೂಡ ಪ್ರವಾಹ ಸಂತ್ರಸ್ತರಿಗೆ ನೆರವಾಗೋಣ, ಸಹಕರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾದ್ದಾರೆ. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಗೆ ಸ್ಯಾಂಡಲ್​ವುಡ್​ ನಟರ ಮನ ಮಿಡಿದಿದೆ. ಪ್ರವಾಹ ಪೀಡಿತರ ಬೆಂಬಲಕ್ಕೆ ನಿಲ್ಲಿ ಎಂದು ದರ್ಶನ್ ಸುದೀಪ್, ಉಪೇಂದ್ರ, ಶ್ರೀ ಮುರುಳಿ, ಗಣೇಶ್ ಸೇರಿ ಅನೇಕ ನಟ ನಟಿಯರು​ ಕೋರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top