fbpx
ಸಮಾಚಾರ

ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರ ನೆರವಿಗೆ ಕಿಚ್ಚ ಸುದೀಪ್!

ರಾಜ್ಯಾದ್ಯಂತ ಮಳೆರಾಯನ ಅಬ್ಬರಕ್ಕೆ ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದ ಬಹುತೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿ ಜಲಾವೃತಗೊಂಡಿದೆ. ಜನರು ಮನೆ, ಮಠ ಕಳೆದುಕೊಂಡು ಕಂಗಲಾಗಿ ಹೋಗಿದ್ದಾರೆ. ಸದ್ಯ ಅವರಿಗೆ ನೆರವಿನ ಸಹಾಯ ಹಸ್ತ ಬೇಕಾಗಿದ್ದು, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಸಹಾಯ ಒದಗಿಸುತ್ತಿದೆ. ಜೊತೆಗೆ ಸ್ಯಾಂಡಲ್​ವುಡ್​ ನಟರು, ಕಲಾವಿದರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ನೆರವಿಗೆ ಧಾವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವಾಗೋಣ ಎಂದು ಕಿಚ್ಚ ಸುದೀಪ್ ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಿಚ್ಚನ ಆಪ್ತವಲಯದ ಹುಡುಗರು ಈಗಾಗಲೇ ಬೆಂಗಳೂರಿನಿಂದ ಅಗತ್ಯ ವಸ್ತುಗಳನ್ನು ಹೊತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಹೊರಟಿರುವುದಾಗಿ ಸುದೀಪ್ ಹೇಳಿದ್ದಾರೆ.

 

 

ಟ್ವೀಟ್‍ನಲ್ಲಿ ಏನಿದೆ?
ನನ್ನ ಸ್ನೇಹಿತರ ಬಳಗಕ್ಕೆ ನನ್ನ ಕೋರಿಕೆ ಎಂದು ಬರೆದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಭೀಕರ ದೃಶ್ಯಾವಳಿಗಳು ಹಾಗೂ ಫೋಟೋಗಳನ್ನು ಮಾತ್ರ ನಾವು ನೋಡುತ್ತಿದ್ದೇವೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಜನಗಳು ಹೇಗಿದ್ದಾರೆ? ಎಲ್ಲಿದ್ದಾರೆ? ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬುದು ತಿಳಿಯುತ್ತಿಲ್ಲ. ಖಂಡಿತವಾಗಿಯು ಸರ್ಕಾರ ಈ ಬಗ್ಗೆ ಏನಾದರು ಮಾಡುತ್ತಿರುತ್ತೆ, ಸುಮ್ಮನೆ ಕುಳಿತಿರೋದಿಲ್ಲ. ಆದರೂ ಕೂಡ ಪ್ರವಾಹ ಉಂಟಾಗಿರುವ ಪ್ರದೇಶಗಳ ಅಕ್ಕ ಪಕ್ಕದಲ್ಲಿರೋ ನನ್ನ ಸ್ನೇಹಿತರ ಬಳಗಕ್ಕೆ ಒಂದು ಚಿಕ್ಕ ವಿನಂತಿ, ಆ ಜಾಗಕ್ಕೆ ನೀವು ಬೇಗ ತಲುಪಬಹುದು ಎಂಬ ಕಾರಣಕ್ಕೆ ಕೋರಿಕೊಳ್ಳುತ್ತಿದ್ದೇನೆ ತಪ್ಪು ತಿಳಿಯಬೇಡಿ. ಆದಷ್ಟು ಬೇಗ ನೀವೆಲ್ಲ ಪ್ರವಾಹ ಪ್ರದೇಶಗಳಿಗೆ ಹೋಗಿ, ಅಲ್ಲಿ ಏನು ಬೇಕು? ತಕ್ಷಣಕ್ಕೆ ಏನು ಮಾಡಬೇಕು ಎನ್ನುವುದನ್ನ ತಿಳಿದುಕೊಂಡು ನನಗೆ ವಿಷಯ ತಿಳಿಸಿದರೆ ನಾವೆಲ್ಲಾ ಸೇರಿ ನಮ್ಮವರಿಗೆ ಏನಾದರು ಮಾಡೋಣ ಎಂಬ ಚಿಕ್ಕ ಕೋರಿಕೆ. ಇದನ್ನು ಮನವಿ ಎಂದು ಪರಿಗಣಿಸಿ. ಧನ್ಯವಾದ ಎಂದು ವಿಡಿಯೋದಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

 

 

ಸುದೀಪ್ ಮಾತಿನಂತೆ ಅಭಿಮಾನಿಗಳು ಉತ್ತರ ಕರ್ನಾಟಕ ನೆರವಿಗೆ ದಾವಿಸುತ್ತಿದ್ದಾರೆ. ಅಲ್ಲದೆ ಸಾಕಷ್ಟು ಜನ ನಿಮ್ಮ ಜೊತೆ ಕೈಜೋಡಿಸುವುದಾಗಿ ಹೇಳಿದ್ದಾರೆ. ಸಂತ್ರಸ್ಥ ಜನರಿಗೆ ತಕ್ಷಣಕ್ಕೆ ಅಗ್ಯವಾಗಿರುವ ವಸ್ತುಗಳು ಬಟ್ಟೆ, ಊಟ, ಸಂರಕ್ಷಿತ ಆಹಾರ, ವಾಟರ್ ಬಾಟೆಲ್, ಜನರಲ್ ಮೆಡಿಸನ್ಸ್, ಸಾಬೂನು, ಟೆಟ್ರಾ ಪ್ಯಾಕ್ ಹಾಲು, ಸೇರಿದಂತೆ ಸಾಕಷ್ಟು ಅಗತ್ಯ ವಸ್ತುಗಳ ಪೂರೈಕೆಗೆ ಅಭಿಮಾನಿಗಲು ಮುಂದಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top