fbpx
ಸಮಾಚಾರ

ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡಕ್ಕೆ 11 ರಾಷ್ಟ್ರ ಪ್ರಶಸ್ತಿ: ನಾತಿಚರಾಮಿಗೆ 5, KGFಗೆ 2 ಪ್ರಶಸ್ತಿ

2019ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು ಕನ್ನಡಕ್ಕೆ ಈ ಸಲ ಬರೋಬ್ಬರಿ ಹನ್ನೊಂದು ಪ್ರಶಸ್ತಿಗಳು ಸಿಕ್ಕಿವೆ. ಅತ್ಯುತ್ತಮ ಪ್ರಾದೇಶಿಕ ಸಿನಿಮಾವಾಗಿ ಆಯ್ಕೆಯಾಗಿರುವ ಶ್ರುತಿ ಹರಿಹರನ್ ಅಭಿನಯದ ನಾಚಿಚರಾಮಿ ಚಿತ್ರಕ್ಕೆ ಒಟ್ಟು ಐದು ಪ್ರಶಸ್ತಿಗಳು ಬಂದಿದ್ದರೇ ಅತ್ತ ಅತ್ಯುತ್ತಮ ಆ್ಯಕ್ಷನ್ ಚಿತ್ರವಾಗಿ ಆಯ್ಕೆಯಾಗಿರುವ ಕೆಜಿಎಫ್ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಬಂದಿವೆ.

ಕನ್ನಡದ ನಾತಿಚರಾಮಿ, ಒಂದಲ್ಲ ಎರಡಲ್ಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೆಜಿಎಫ್, ಚಿತ್ರಗಳು ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿವೆ. ಸ|ಕಿ|ಪ್ರ|ಶಾಲೆ ಕಾಸರಗೋಡು ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ರಾಷ್ಟ್ರ ಪ್ರಶಸ್ತಿ ಭಾಜನವಾದ ಕನ್ನಡ ಸಿನಿಮಾಗಳ ಪಟ್ಟಿ ಈ ರೀತಿ ಇದೆ.
* ಅತ್ಯುತ್ತಮ ಪ್ರಾದೇಶಿಕ ಚಿತ್ರ – ನಾತಿಚರಾಮಿ
* ಅತ್ಯುತ್ತಮ ಮಹಿಳಾ ಗಾಯಕಿ (ಮಾಯಾವಿ ಮಾನವೆ ಹಾಡು) (ಬಿಂಧು ಮಾಲಿನಿ ಗಾಯಕಿ) – ನಾತಿಚರಾಮಿ
* ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ – ನಾತಿಚರಾಮಿ
* ಅತ್ಯುತ್ತಮ ಸಂಕಲನ – ನಾತಿಚರಾಮಿ
* ಅತ್ಯುತ್ತಮ ಸಾಹಸ ಚಿತ್ರ – ಕೆಜಿಎಫ್
* ಅತ್ಯುತ್ತಮ ವಿಎಫ್ ಎಕ್ಸ್ ಚಿತ್ರ – ಕೆಜಿಎಫ್
* ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ – ಒಂದಲ್ಲ, ಎರಡಲ್ಲ
* ಅತ್ಯುತ್ತಮ ಬಾಲ ಕಲಾವಿದ – ಒಂದಲ್ಲ, ಎರಡಲ್ಲ
* ಅತ್ಯುತ್ತಮ ಮಕ್ಕಳ ಚಿತ್ರ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು
* ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರ – ಮೂಕಜ್ಜಿಯ ಕನಸುಗಳು
* ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ ನಟಿ ಶೃತಿ ಹರಿಹರನ್ ಗೆ ವಿಶೇಷ ಪ್ರಶಸ್ತಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top