fbpx
ಸಮಾಚಾರ

ಗಂಜಿ ಕೇಂದ್ರದಲ್ಲಿ ಮಕ್ಕಳ ಜೊತೆ ಊಟಮಾಡಿದ ಐಎಎಸ್ ಅಧಿಕಾರಿಯ ಸರಳತೆಗೆ ಮನಸೋತು ಪತ್ರದ ಮೂಲಕ ಥ್ಯಾಂಕ್ಸ್ ಹೇಳಿದ ಬಾಲಕಿ.

ಧಾರಾಕಾರ ಮಳೆಯಿಂದಾಗಿ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದ್ದು, ಜನಜೀವನ ತತ್ತರವಾಗಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಬೀದರ್, ಕಲಬುರಗಿ, ಉತ್ತರ ಕನ್ನಡ, ಹಾವೇರಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡದ ಬಹುತೇಕ ಭಾಗಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು, ಭೂ ಕುಸಿತ ಉಂಟಾಗಿ, ಪ್ರಮುಖ ಹೆದ್ದಾರಿಗಳ ಸಂಪರ್ಕ ಕಳೆದು ಹೋಗಿದೆ. ಜಲ ಪ್ರಳಯದ ಸ್ಥಿತಿಯಲ್ಲಿ ಸಿಲುಕಿ ತತ್ತರಿಸುತ್ತಿರುವ ಜನತೆಯನ್ನು ಕೈ ಎತ್ತಿ ಹಿಡಿಯಲು ನೆರವಾಗಬೇಕಿದೆ.

 

 

ಕರ್ನಾಟಕ ಸರ್ಕಾರ ಹಾನಿಗೊಳಗಾದ ಜಿಲ್ಲೆಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದ್ದು , ರಾಜ್ಯದ ಅನೇಕ ಐಎಎಸ್ ಆಫೀಸರ್ ಗಳು ಈ ಕೇಂದ್ರಗಳ ಉಸ್ತುವಾರಿವಹಿಸಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ಮಣಿವಣ್ಣನ್ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ . ಈ ವೇಳೆ ಗಂಜಿ ಕೇಂದ್ರದಲ್ಲಿ ಮಕ್ಕಳ ಜೊತೆ ಉತ್ತಮ ಮಾಡುವ ಮೂಲಕ ಸರಳತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿನ ಮಕ್ಕಳ ಜೊತೆ ಮಾತನಾಡಿ ಅವರಿಗೆ ಶೈಕ್ಷಣಿಕವಾಗಿ ಮಾಹಿತಿ ನೀಡಿದರು.. ಅವರನ್ನು ಉತ್ತೇಜನ ಮಾಡಿ ಪ್ರೋತ್ಸಾಹಿಸಿದರು.

ಪತ್ರದ ಮೂಲಕ ಧನ್ಯವಾದ ಹೇಳಿದ ಬಾಲಕಿ:
ಇನ್ನು ಅಧಿಕಾರಿಗಳ ಈ ಸರಳತೆಗೆ ಮನಸೋತ ಬಾಲಕಿಯೊಬ್ಬಳು ಪತ್ರದ ಮೂಲಕ ಧನ್ಯವಾದ ಹೇಳಿದ್ದಾಳೆ.. ಚರಿತಾ ಜೆ.ಡಿ ಜೈನ್ ಎಂಬ ಬಾಲಕಿ ಈ ಪತ್ರವನ್ನು ಬರೆದಿದ್ದು ಸದ್ಯ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

” ಮೊದಲು ನಾವು ನಿಮಗೆ ಧನಿವಾದಗಳನ್ನು ತಿಳಿಸಲು ಇಷ್ಟಪಡುತ್ತೇವೆ. ಯಾಕೆಂದರೆ ನೀವು ನಮಗೆ ಮುಂದಿನ ಜೀವನಕ್ಕೆ ಸ್ಪೂರ್ತಿಯಾಗಿದ್ದೀರಿ. ಯಾಕೆಂದರೆ ಅದು ಕೇವಲ ನಿಮ್ಮ ಸರಳತೆ, ನಿಮ್ಮ ಸ್ಥಾನ, ನಿಮ್ಮ ವಿದ್ಯಾರ್ಹತೆ ಮತ್ತು ನಿಮ್ಮ ಸ್ಪೂರ್ತಿದಾಯಕ ವೃತ್ತಿಜೀವನ. ನೀವು ನಮ್ಮನ್ನು ಕಾರಿನಲ್ಲಿ ಕರೆದುಕೊಂಡು ಹೋದಾಗ ನಮಗೆ ಮುಂದೆ ನಾವು ನಿಮ್ಮಂತೆಯೇ ಒಬ್ಬ ಒಳ್ಳೆಯ ಅಧಿಕಾರಿಯಾಗಿ ಒಳ್ಳೆಯ ಕೇಳಾಸಗಳನ್ನು ಮಾಡಬೇಕೆಂಬ ಆಸೆ ಮೂಡಿದೆ. ಹಾಗೆಯೆ ನಾವು ಕಾರಿನಲ್ಲಿ ಹೋಗುವಾಗ ಕಾರ್ ಓಡಿಸುತ್ತಿರುವ ಹೇಳಿದ್ದರು ನೀವು ಗಂಜಿ ಕೇಂದ್ರ ಸ್ಥಾಪನೆ ಮಾಡಿದ್ದು ಮತ್ತು ಇವತ್ತು ಅಲ್ಲಿ ಹೋಗಿ ತಿಂಡಿ ತಿಂದಿದ್ದು ತಿಳಿಯಿತು. ಇದರಿಂದ ನಮಗೆ ಮುಂದೆ ನಾವು ಕೂಡ ನಿಮ್ಮಂತೆಯೇ ಒಳ್ಳೆಯ ಅಧಿಕಾರಿಯಾಗಿ ಒಳ್ಳೆಯ ಕೆಲಸ ಹಾಗು ಸಮಾಜ ಸೇವೆಯಲ್ಲಿ ಭಾಗಿಯಾಗಬೇಕೆಂಬ ಆಲೋಚನೆ ಮತ್ತು ದೃಢ ನಿರ್ಧಾರ ಮಾಡಿದ್ದೇನೆ. ಮತ್ತೊಮ್ಮೆ ನಿಮಗೆ ತುಂಬು ಹೃದಯದ ಧನ್ಯವಾದಗಳು” ಎಂಬ ತನ್ನ ಪತ್ರದಲ್ಲಿ ಚರಿತಾ ಬರೆದಿದ್ದಾಳೆ.

 


 

ಅಂದಹಾಗೆ ಧಾರವಾಡ ಪಾಲಿಕೆ ಆಯುಕ್ತರಗಿದ್ದಾಗ “ಅಕ್ರಮ ಕಟ್ಟಡ ತೆರವು” ಮಾಡುವ ಮೂಲಕ ಸುದ್ದಿ ಮಾಡಿದ ಮಣಿವಣ್ಣನ್ ಮುಂದಿನ ದಿನಗಳಲ್ಲಿ ಅನೇಕ ಜನ ಪರ ಕಾರ್ಯಕ್ರಮ ಮಾಡಿ, ಜನರ ಮತ್ತು ಕೆಲಸ ಮಾಡಿದ ಜಿಲ್ಲೆಗಳಲ್ಲಿ ಹೆಸರು ಮಾಡಿದರು. ಈಗಲೂ ಕೂಡ ಅವರನ್ನು ಬಲ್ಲ ಮಾಧ್ಯಮದ ಸ್ನೇಹಿತರು ಮತ್ತು ಅವರ ಸ್ನೇಹಿತರು ಅವರನ್ನು “Demolition Man” ಎಂದು ಕರೆಯುತ್ತಾರೆ.

ಬೆಸ್ಕಾಂ, [BESCOM] ಚುನಾವಣ ಆಯೋಗ,[Election Commission] ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ[Karnataka Pollution Control Board], ಹೀಗೆ ಅನೇಕ ಕಡೆ ಕೆಲಸ ಮಾಡಿ ತಮ್ಮ “ಛಾಪನ್ನು” ಮೂಡಿಸಿರುವ ದಿಟ್ಟ, ನೇರ-ನುಡಿಯ, ಆಡಳಿತದಲ್ಲಿ- “ಕನ್ನಡ ಬಳಿಸುವ ” ಅಧಿಕಾರಿ ನಮ್ಮ ಮಣಿವಣ್ಣನ್ ಸಾಹೇಬರು. ತಮ್ಮ ಕಚೇರಿಯಲ್ಲಿ CCTV ಕ್ಯಾಮೆರಾ ಅಳವಿಡಿಸಿ ಮತ್ತು ಅದನ್ನ ಅವರ ಇಲಾಖೆಯ ಅಂತರ್ಜಾಲಕ್ಕೆ (department website) ಸಂಪರ್ಕ ಮಾಡಿ ಪಾರದರ್ಶಕತೆಯನ್ನು ಮೆರೆದ ಕೆಲವೇ ಕೆಲವು ಐಎಎಸ್ ಅಧಿಕಾರಿಗಳಲ್ಲಿ ಮಣಿವಣ್ಣನ್ ಅವರು ಕೂಡ ಒಬ್ಬರು. ಇಷ್ಟೇ ಅಲ್ಲದೆ ತಮ್ಮ ಅಧಿಕೃತ ಚೇಂಬರ್ ನಲ್ಲಿ “ಗಾಜಿನ ಬಾಗಿಲನ್ನು”[Transparent Door] ಹಾಕಿಸಿ, ತಮ್ಮನ್ನು ಯಾರು ಬೇಕಾದರೂ ಸಂಪರ್ಕಿಸಬಹುದು ಎಂಬ ಅದ್ಬುತ “ವರ್ಕ್ ಎಥಿಕ್ಸ್” ಅನ್ನು ಅನುಷ್ಠಾನಗೊಳಿಸಿರುವುದು ಮಣಿವಣ್ಣನ್ ಸಾಹೇಬರ “ಜನ ಪರ” ಕಾಳಜಿಗೆ ಒಂದು ನಿದರ್ಶನ.

1998 ಬ್ಯಾಚ್ ನ IAS ಅಧಿಕಾರಿಯಾಗಿರುವ ಮಣಿವಣ್ಣನ್ ರವರು 2008 ರಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಮೈಸೂರಿನಲ್ಲಿ “ರಾಜ್ಯ ಚುನಾವಣ ಅಧಿಕಾರಿಯಾಗಿ” ಮತ್ತು ಜಿಲ್ಲದಿಕಾರಿಯಾಗಿ ಉತ್ತಮವಾಗಿ ಕಾರ್ಯ-ನಿರ್ವಹಿಸಿದರು. ಅಕ್ರಮ-ಹಣ ವನ್ನು ಜಪ್ತಿ ಮಾಡಿ, ಚುನಾವಣ ನೀತಿ ಸಂಹಿತೆಯನ್ನು[Election Code of Conduct] ಉಲ್ಲಂಘಿಸಿದವರ ವಿರುದ್ದ “ಸಿಡಿದೆದ್ದ” ಮಣಿವಣ್ಣನ್ ರವರು ಯಾವುದೇ ರಾಜಕೀಯ ಪಕ್ಷ, ಧುರೀಣರ ಒತ್ತಡಕ್ಕೆ ಮಣಿಯದೆ, ಕೇಸ್ ಜಡಿದರು. 12 ಕಂಟ್ರೋಲ್ ರೂಂ, 130 ಮೊಬೈಲ್ ಪೋಲಿಸ್ ಠಾಣೆಗಳನ್ನೂ ಹಾಕಿ, ಯಶಸ್ವೀ ಯಾಗಿ ತಮ್ಮ ಕರ್ತವ್ಯವನ್ನು ನೆರವೇರಿಸಿದ ಖ್ಯಾತಿ ಮಣಿವಣ್ಣನ್ ರವರಿಗೆ ಸಲ್ಲುತ್ತದೆ.

ತಮ್ಮ ಯಶಸ್ಸಿಗೆ – ತಮ್ಮ ತಂಡದ “ಸಾಂಘಿಕ ಪ್ರಯತ್ನ” [Team work] ಕಾರಣ ಎಂದು ಹೇಳುವ ಮಣಿವಣ್ಣನ್ ರವರದು ಅತ್ಯಂತ – ನೇರ ನುಡಿಯ ಮತ್ತು ಸರಳ ವ್ಯಕ್ತಿತ್ವ.ಬೇರೆ ರಾಜ್ಯದಲ್ಲಿ ಹುಟ್ಟಿ-ಬೆಳೆದರೂ ನಮ್ಮ ಭಾಷೆಯನ್ನೂ ಕಲಿತು ತನ್ನ ಅದ್ಬುತವಾದ ಸೇವೆಯಿಂದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರೇ ನಮ್ಮ ಖಡಕ್ ಅಧಿಕಾರಿ – ಮಣಿವಣ್ಣನ್. (IAS)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top