fbpx
ಸಮಾಚಾರ

KGF ಚಾಪ್ಟರ್-2 ಟೀಂ ಸೇರಿಕೊಂಡ ಕಾಲಿವುಡ್ ಯುವನಟ!

2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಮಾಡಿತ್ತು. ಕೆಜಿಎಫ್-2 ಚಿತ್ರತಂಡ ಸರಳವಾಗಿ ಮುಹೂರ್ತ ಮಾಡಿಕೊಂಡು ಚಿತ್ರೀಕರಣವನ್ನು ಆರಂಭಿಸಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಚಿತ್ರದ ಶೂಟಿಂಗ್ ಸೆಟ್ ಫೋಟೋಗಳು ಸದ್ದು ಮಾಡಿದ್ದವು. ಕೆಜಿಎಫ್ ನಿರೀಕ್ಷೆಗಳ ಪರ್ವತವನ್ನೇ ಹುಟ್ಟಿಸಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಚಿತ್ರಕ್ಕೆ ಕಾಲಿವುಡ್ ಯುವನಟ ಸೇರಿಕೊಂಡಿದ್ದಾರೆ.

ಯುವ ನಟ ಸರಣ್ ಕೆಜಿಎಫ್ ಚಿತ್ರತಂಡವನ್ನು ಕೂಡಿಕೊಂಡಿದ್ದು ಇಲ್ಲಿ ಸರಣ್ ಮಾಡಲಿರುವ ಪಾತ್ರವೇನು ಎಂಬ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ‘ಕೆ.ಜಿ.ಎಫ್ 2’ನಲ್ಲಿ ಸರಣ್ ರಾಕಿಂಗ್ ಸ್ಟಾರ್ ಯಶ್​ನ ಯೌವ್ವನದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ‘ಕೆ.ಜಿ.ಎಫ್’ ಸೆಟ್​ಗೆ ತಮಿಳು ನಟನ ಎಂಟ್ರಿ ಸುದ್ದಿಗಳು ಭರ್ಜರಿ ಹರಿದಾಡುತ್ತಿದ್ದು, ಶೀಘ್ರದಲ್ಲೇ ಯುವ ರಾಕಿ ಭಾಯ್​ಯ ಪಾತ್ರದ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ.

ಈಗಷ್ಟೇ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿರುವ ಯುವ ನಟ ಸರಣ್ ಸಿಕ್ಕಿರುವ ಸಣ್ಣ ಪುಟ್ಟ ಪಾತ್ರಗಳ ಮೂಲಕವೇ ಎಲ್ಲರನ್ನು ಮೋಡಿ ಮಾಡಿದ್ದರು. ಅದರಲ್ಲೂ ಧನುಷ್ ಅಭಿನಯದ ವಡ ಚೆನ್ನೈ(ಉತ್ತರ ಚೆನ್ನೈ) ಚಿತ್ರದಲ್ಲಿನ ಪಾತ್ರವು ಸರಣ್​​ಗೆ ಈಗ ಸೂಪರ್ ಡೂಪರ್ ಹಿಟ್​ ಚಿತ್ರದ ಭಾಗವಾಗುವ ಅವಕಾಶ ಒದಗಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top