fbpx
ಸಮಾಚಾರ

ಸೀಮೆಸುಣ್ಣದಲ್ಲಿ ಅರಳಿದ ದುರ್ಯೋಧನ ದರ್ಶನ್ ಕಲಾಕೃತಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳು ಸದಾ ಇಷ್ಟವಾದ ಉಡುಗೊರೆಯನ್ನು ಕೊಡುತ್ತಾರೆ.. ಕೈಯಾರೆ ಬಿಡಿಸಿದ ಪೇಂಟಿಂಗ್, ಅಪರೂಪದ ಫೋಟೋ ಕಲೆಕ್ಷನ್ಸ್ ಹೀಗೆ ಅನೇಕ ರೀತಿಯ ಉಡುಗೊರೆಗಳು ಅಭಿಮಾನಿಗಳ ಕಡೆಯಿಂದ ದರ್ಶನ್ ಹುಡುಕಿಕೊಂಡು ಬರುತ್ತಿರುತ್ತವೆ.. ಇದೀಗ ಅಭಿಮಾನಿಯೊಬ್ಬರು ದಾಸನಿಗೆ ಅಪರೂಪದ ಉಡುಗೊರೆಯನ್ನ ಕೊಟ್ಟಿದ್ದಾರೆ.

 

 

ಈಗ ಕಲಾವಿದನ ಕೈ ಚಳಕದಲ್ಲಿ ದರ್ಶನ್ ರ ಸುಂದರ ಕಲಾಕೃತಿಯೂ ಸಿದ್ದವಾಗಿದೆ. ಹೌದು, ಈಗ ಚಾಕ್ ಪೀಸ್ ( ಸೀಮೆಸುಣ್ಣ) ನಲ್ಲಿ ದರ್ಶನ್ ರ ಆಕೃತಿಯನ್ನು ಕೆತ್ತಲಾಗಿದೆ. ಒಂದು ಸಣ್ಣ ಸ್ತಂಭದಲ್ಲಿ ಅರ್ಧದಷ್ಟು ದರ್ಶನ್ ಆಕಾರವನ್ನು ಕೆತ್ತಿದ್ದಾರೆ. ಬಳಿಕ ಅದರ ಸುತ್ತಲು ಗಾಜಿನಿಂದ ಮುಚ್ಚಲಾಗಿದೆ. ಇದು ಕೈಬೆರಳಿನ ಗಾತ್ರದಲ್ಲಿದೆ. ಈ ಉಡುಗೊರೆಯನ್ನು ಅಂಗೈನಲ್ಲಿ ಹಿಡಿದುಕೊಳ್ಳುವಷ್ಟು ಚಿಕ್ಕದಾಗಿದೆ. ಈ ವಿಭಿನ್ನವಾದ ಕಲಾಕೃತಿಯನ್ನು ಖ್ಯಾತ ಕಲಾವಿದ ಸಚಿನ್​ ಸಿಂಘೆ ಕೆತ್ತಿದ್ದಾರೆ..

ಸಚಿನ್ ಸಾಂಘೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಸೀಸದ ಕಡ್ಡಿ ಹಾಗೂ ಸೀಮೆಸುಣ್ಣದ ಮೇಲೆ ಚಿತ್ರಗಳನ್ನು, ಪ್ರತಿಮೆಗಳನ್ನು ಬಿಡುಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಅವರು ಈಗಾಗ್ಲೇ ಸಚಿನ್ ತೆಂಡೂಲ್ಕರ್, ರಜಿನಿಕಾಂತ್ ನರೇಂದ್ರ ಮೋದಿಯಂತಹ ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಸೀಮೆಸುಣ್ಣದಲ್ಲಿ ಕೆತ್ತಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ಈ ಹಿಂದೆ ಅವರು ಅಮಿತಾಭ್ ಬಚ್ಚನ್ , ಪ್ರಧಾನಿ ನರೇಂದ್ರ ಮೋದಿ, ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಸೂಪರ್ ಸ್ಟಾರ್ ರಜಿನೀಕಾಂತ್, ರಕ್ಷಿತ್ ಶೆಟ್ಟಿ ಸೇರಿದಂತೆ ಸಾಕಷ್ಟು ನಟರ ಹಾಗೂ ಜನಪ್ರಿಯ ವ್ಯಕ್ತಿಗಳ ಚಿತ್ರಗಳನ್ನು ಕೆತ್ತಿರುವ ಅವರು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಕೃತಿ ಕೆತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top