fbpx
ಸಮಾಚಾರ

ಮನೆಯಲ್ಲಿ ಹಾಲು ಅಥವಾ ಮೊಸರಿನ ಪ್ಯಾಕೆಟ್ ಬಳಸುವವರೇ ಒಮ್ಮೆ ಇಲ್ಲಿ ಗಮನಿಸಿ!

ಬಹಳಷ್ಟು ಜನ ಪ್ರತಿದಿನ ಮೊಸರು ಅಥವಾ ಹಾಲಿನ ಪ್ಯಾಕೆಟ್ ಅನ್ನು ಮನೆಯಲ್ಲಿ ಬಳಸುತ್ತಾರೆ, ಆದ್ರೆ ಕೆಲವರು ಹಾಲಿನ ಅಥವಾ ಮೊಸರಿನ ಪ್ಯಾಕೆಟ್ ಅನ್ನು ಕಟ್ ಮಾಡಿ ಬಿಸಾಕುತ್ತಾರೆ, ಆದ್ರೆ ಕಟ್ ಮಾಡುವ ರೀತಿ ಈ ರೀತಿಯಲ್ಲಿದ್ದರೆ ನಮ್ಮ ಆರೋಗ್ಯಕ್ಕೂ ಪರಿಸರಕ್ಕೂ ಒಳ್ಳೆಯದು ಅನ್ನೋದನ್ನ ತಿಳಿಯಲಾಗಿದೆ.

ಹೌದು ಬಹಳಷ್ಟು ಜನ ಹಾಲಿನ ಪ್ಯಾಕೆಟ್ ಅನ್ನು ಕಟ್ ಮಾಡಿ ತುಂಡನ್ನು ಹಾಗೆ ಇಸಕುತ್ತಾರೆ ಮತ್ತು ಪೂರ್ಣ ಪ್ರಮಾಣದ ಪ್ಯಾಕೆಟ್ ಅನ್ನು ಕಸದ ಬುಟ್ಟಿಗೆ ಅಕುತ್ತಾರೆ ಅಥವಾ ಪೇಪರ್ ಮಾರುವವರಿಗೆ ಮಾರುತ್ತಾರೆ, ಕಟ್ ಮಾಡಿ ಬಿಸಾಕುವ ಪ್ಯಾಕೆಟ್ ನಿಂದ ಆಗುವ ತೊದರೆ ಏನು ಅನ್ನೋದನ್ನ ಮುಂದೆ ತಿಳಿಸಲಾಗಿದೆ ಗಮನಿಸಿ.

ನಾವುಗಳು ಆ ಪ್ಯಾಕ್ ನ ಕವರಿನ ತುದಿಯ ಭಾಗವನ್ನು ಕಟ್ ಮಾಡಿ ಬಿಸಾಕುತ್ತೇವೆ. ಆದರೆ ಆ ಕವರಿನ ದೊಡ್ಡ ಮುಖ್ಯ ಭಾಗ ರಿಸೈಕ್ಲಿಂಗ್ ಪ್ರಕ್ರಿಯೆಗೆ ಹೋಗಿ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಕತ್ತರಿಸಲ್ಪಟ್ಟಿರುವ ಸಣ್ಣ ತುಣುಕು ಮಾತ್ರ ಕಸದಲ್ಲಿ ಸೇರಿ ಹೋಗುತ್ತದೆ. ಅದು ರಿಸೈಕ್ಲಿಂಗ್ ಪ್ರಕ್ರಿಯೆಗೆ ಸಿಗದೆ ಶಾಶ್ವತವಾಗಿ ಭೂಮಿಯ ಮೇಲೆ ಅದೇ ರೂಪದಲ್ಲಿ ಉಳಿಯುತ್ತದೆ. ಪ್ರತಿದಿನ ಇಂತಹ ತುಣುಕುಗಳು ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಲಕ್ಷಗಟ್ಟಲೆ ಪ್ರಮಾಣದ ಪ್ಲಾಸ್ಟಿಕ್ ಕಸವಾಗಿ ಸೇರಿ ಪರಿಸರಮಾಲಿನ್ಯಕ್ಕೆ‌ ಪ್ರಧಾನ ಕಾರಣವಾಗುತ್ತಿದೆ.

ನಾವು ಮನಸ್ಸು ಮಾಡಿದರೆ ಇದನ್ನು ಸುಲಭವಾಗಿ ತಪ್ಪಿಸಬಹುದು. ಹಾಲಿನ ಪ್ಲಾಸ್ಟಿಕ್ ಕವರನ್ನು ಸೂಜಿ/ಪಿನ್ ಮೂಲಕ‌ ರಂಧ್ರ ಮಾಡಿ ಹಾಲನ್ನು ಪಾತ್ರೆಗೆ ಸುರಿದುಕೊಳ್ಳಬಹುದು ಅಥವಾ ತುಣುಕನ್ನು ಬೇರ್ಪಡಿಸದೆಯೇ ಕವರನ್ನು ಕಟ್ ಮಾಡಿ ಬಳಸಿಕೊಳ್ಳಬಹುದಾಗಿದೆ.

ಆಗ ಪ್ಲಾಸ್ಟಿಕ್ ತುಣುಕಿನ ಪ್ರಶ್ನೆಯೇ ಬರುವುದಿಲ್ಲ. ಈಗಾಗಲೇ ಹಲವರು ಹೀಗೆ ಮಾಡುತ್ತಿದ್ದಾರೆ. ಉಳಿದ ಜನಗಳು ಈ ಕ್ರಮವನ್ನು ತಪ್ಪದೆ ಅನುಸರಿಸಿದರೆ ನಾವು ಪ್ಲಾಸ್ಟಿಕ್ ಅನ್ನು ಕಸವಾಗಿ ಮಾರ್ಪಡಿಸದೆ ಮರುಬಳಕೆಗೆ ಬಳಸಿಕೊಳ್ಳಬಹುದು. ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಪ್ರಕೃತಿಯನ್ನು ಉಳಿಸಬಹುದಾಗಿದೆ. ಹಾಗಾಗಿ ಈ ವಿಚಾರ ನಿಮಗೆ ಉಪಯುಕ್ತ ಅನಿಸಿದರೆ ಖಂಡಿತ ಬೇರೆಯವರಿಗೂ ಹಂಚಿಕೊಳ್ಳಿ ಪರಿಸರ ರಕ್ಷಣೆ ನಮ್ಮೆಲರ ಹಕ್ಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top